ಬಿಜೆಪಿ ವಿರುದ್ಧ ಐಕ್ಯಕೂಟವೊಂದು ತಲೆಯೆತ್ತುತ್ತಿರುವುದರ ಸೂಚನೆಯೇ ಅವಿಶ್ವಾಸ ಗೊತ್ತುವಳಿ ಮಂಡನೆ?

0
1380

ಏ.ಎಸ್. ಸುರೇಶ್‍ಕುಮಾರ್

ನವದೆಹಲಿ: ಬಿಜೆಪಿ ವಿರುದ್ದದ ಪ್ರಾದೇಶಿಕ ಪಕ್ಷಗಳ ಐಕ್ಯತೆ ಪ್ರಭಲವಾಗುತ್ತಿದೆ. ಆಂದ್ರಪ್ರದೇಶದ ಆಡಳಿತ ಪಕ್ಷ ತೆಲುಗು ದೇಶಂ ಪಾರ್ಟಿ ಬಿಜೆಪಿ ಮೈತ್ರಿ ಕೂಟದಿಂದ ಹೊರಬಿದ್ದಿದೆ.
ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ ಆರ್ ಕಾಂಗ್ರೇಸ್ ಕೂಡಾ ಲೋಕಸಬೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ನೋಟೀಸು ನೀಡಿದೆ. ಇದು ಬಿಜೆಪಿಯನ್ನು ಕಂಗೆಡಿಸಿದೆ,. ಈ ಅವಶ್ವಾಸ ಗೊತ್ತವಳಿಯನ್ನು ಬೆಂಬಲಿಸುವತ್ತ ಟಿಡಿಪಿ ಹೆಜ್ಜೆ ಹಾಕಿದೆ. ಈ ಮಧ್ಯೆ ಸಮಾಜವಾದಿ ಮತ್ತು ಬಿಎಸ್‍ಪಿ ಪಕ್ಷದ ಜೊತೆಗಿನ ಮೈತ್ರಿ ಈ ಉಪಚುನಾವಣೆಗೆ ಸೀಮಿತವಾಗಿಲ್ಲ ಎಂದು ಎಸ್.ಪಿ ನಾಯಕ ಅಖಿಲೇಶ್ ಸ್ಪಷ್ಟಪಡಿಸಿದ್ದಾರೆ. ಉಪ ಚುನಾವಣೆಯ ಗೆಲುವಿನ ತಕ್ಷಣ ಮಾಯಾವತಿ ಮನೆಗೆ ತೆರಳಿದ ಅಖಿಲೇಶ್ ಕೃತಜ್ಞತೆ ಸಲ್ಲಿಸಿ ಚರ್ಚಿಸಿದ್ದರು. 2019ರ ಚುನಾವಣೆ ದೃಷ್ಟಿಯಲ್ಲಿರಿಸಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಎನ್.ಸಿ.ಪಿ. ನಾಯಕ ಶರದ್ ಪವಾರ್ ಜೊತೆ ಭೇಟಿ ನಡೆಸಿ ಚರ್ಚಿಸಿದರು.

ಉತ್ತರ ಪ್ರದೇಶ ಉಪಚುನಾವಣೆಯ ಪಲಿತಾಂಶ ಬಿಜೆಪಿಗೆ ತೀವ್ರ ಏಟು ನೀಡಿದ ಬಳಿಕ ರಾಜಕೀಯದಲ್ಲಿ ಸಂಚಲನವುಂಟಾಗಿದೆ. ಆಂದ್ರ ಪ್ರದೇಶಕ್ಕೆ ವಿಶೇಷ ಮಾನ್ಯತೆ ನೀಡಿ ಕೇಂದ್ರ ಹೆಚ್ಚಿನ ನೆರವು ನೀಡಬೇಕೆಂದು ನಿರಂತರ ಒಂಬತ್ತು ದಿನಗಳಿಂದ ಆಂದ್ರಪ್ರದೇಶದ ಪಕ್ಷಗಳು ಮೋದಿ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಸಿದ್ದವಾಗುತ್ತಿರುವುದು ಬಿಜೆಪಿ ಪಾಳಯದಲ್ಲಿ ಆತಂಕ ಮೂಡಿಸಿದೆ. ಟಿಡಿಪಿ ಬಿಟ್ಟರೆ ವೈಎಸ್‍ಆರ್ ಜೊತೆ ಸರಕಾರ ನಡೆಸುವ ಲೆಕ್ಕಾಚಾರದಲ್ಲಿ ಬಿಜೆಪಿ ಇತ್ತು.
ಆದರೆ ಆಂಧ್ರದ ಬೇಡಿಕೆಗೆ ಕೇಂದ್ರ ಬೆನ್ನು ತಿರುಗಿಸಿದ್ದು ಚಂದ್ರಬಾಬು ನಾಯ್ಡು ಮತ್ತು ಜಗನ್ ರೆಡ್ಡಿಯನ್ನು ಹತ್ತಿರಗೊಳಿಸುತ್ತಿದೆ. ಒಂಬತ್ತು ಸಂಸದರನ್ನು ಹೊಂದಿರುವ ವೈಎಸ್ ಆರ್ ಕಾಂಗ್ರೆಸ್ ತನ್ನ ಅವಿಶ್ವಾಸ ಗೊತ್ತುವಳಿಯನ್ನು ಬೆಂಬಲಿಸಲು ಕಾಂಗ್ರೆಸ್ ಮತ್ತು ಸಿಪಿಎಮ್ ನೇತಾರರನ್ನು ಸಂಪರ್ಕಿಸಲಿದೆ.