ಅಫ್ಘಾನ್ ಜೈಲಿನಿಂದ 300 ತಾಲಿಬಾನ್ ಕೈದಿಗಳ ಬಿಡುಗಡೆ: ಶಾಂತಿ ಮಾತುಕತೆಯ ಫಲಶ್ರುತಿ

0
73

ಕಾಬೂಲ್, ಜೂ. 12: ಶಾಂತಿ ಮಾತುಕತೆಯ ಪ್ರಯುಕ್ತ ಅಫ್ಘಾನ್ ಜೈಲುಗಳಿಂದ 30 ತಾಲಿಬಾನ್ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ. ಪುಲೆಚರ್ಕಿ ಜೈಲಿನಿಂದ 170 ಮಂದಿ ಮತ್ತು ಇತರ ಜೈಲುಗಳಿಂದ 130 ಮಂದಿ ಬಿಡುಗಡೆಗೊಂಡಿದ್ದಾರೆ. ಎರಡು ದಶಕಗಳ ಆಂತರಿಕ ಯುದ್ಧದ ಬಳಿಕ ತಾಲಿಬಾನ್‍ನೊಂದಿಗೆ ಅಫ್ಘಾನಿಸ್ತಾನ ಸರಕಾರ ಶಾಂತಿ ಮಾತುಕತೆ ಆರಂಭಿಸಿದೆ. ತಾಲಿಬಾನ್ ಸದಸ್ಯರಿಗೆ ಸಹಕರಿಸಿದವರು ಅಫ್ಘಾನಿಸ್ತಾನ ಸರಕಾರ ಬಂಧಿಸಿ ಜೈಲಿಗೆ ದೂಡಿತ್ತು. ಇವರನ್ನೀಗ ಬಿಡುಗಡೆಗೊಳಿಸಲಾಗುತ್ತಿದೆ.

ಮೇ ಮೂರರಂದು ಗ್ರಾಂಡ್ ಕೌನ್ಸಿಲ್ ಸಭೆಯ ಸಮಾರೋಪದ ದಿನದಂದು ಅಧ್ಯಕ್ಷ ಅಶ್ರಫ್ ಘನಿ ತಾಲಿಬಾನ್ ಕೈದಿಗಳನ್ನು ಬಿಡುಗಡೆಗೊಳಿಸುವ ವಿವರವನ್ನು ಪ್ರಕಟಿಸಿದ್ದರು. ರಮಝಾನ್ ತಿಂಗಳು, ಈದ್ ಪ್ರಯುಕ್ತ ಬಿಡುಗಡೆಗೊಳಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.