ಭಾರತ-ಚೀನಾಗಳ ಸೈನಿಕ ಮಟ್ಟದಲ್ಲಿ ಸಹಮತ; ಪೂರ್ವ ಲಡಾಕ್‌ನಿಂದ ಹಿಂದೆ ಸರಿಯಲು ತೀರ್ಮಾನ

0
145

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪೂರ್ವ ಲಡಾಕಿನ ಪಾಂಗೊಂಗ್‍ನಿಂದ ಹಿಂದೆ ಸರಿಯಲು ಭಾರತ-ಚೀನಾಗಳ ಸೈನಿಕ ಮಟ್ಟದಲ್ಲಿ ಸಹಮತ ಏರ್ಪಟ್ಟಿದೆ ಎಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಪಾರ್ಲಿಮೆಂಟಿಗೆ ತಿಳಿಸಿದರು. ಪೂರ್ವ ಲಡಾಕಿನಲ್ಲಿ ಕಳೆದ 9 ತಿಂಗಳಿನಿಂದ ಮುಂದುವರಿಯುತ್ತಿರುವ ಭಾರತ-ಚೀನ ಘರ್ಷಣೆ ಸರಳಗೊಳಿಸಲು ನಿರ್ಣಯಿಸಲು ತೀರ್ಮಾನಿಸಲಾಗಿದೆ.

ಪಾಂಗೊಂಗಿನ ದಕ್ಷಿಣ, ಉತ್ತರ ಕ್ಷೇತ್ರದಿಂದ ಸೇನೆಗಳು ಹಿಂದಕ್ಕೆ ಹೋಗಲು ಚೀನದೊಂದಿಗೆ ಚರ್ಚೆ ಮಾಡಿ ಸಹಮತ ಏರ್ಪಟ್ಟಿದೆ. ಹಂತಹಂತವಾಗಿ ಇಲ್ಲಿಂದ ಎರಡು ಕಡೆಯ ಸೇನೆಗಳು ಹಿಂದೆ ಸರಿಯಲಿವೆ. ಕೆಲವು ಸಮಸ್ಯೆಗಳು ಬಗೆ ಹರಿಯಲು ಬಾಕಿ ಉಳಿದುಕೊಂಡಿವೆ. ಲಡಾಕಿನಲ್ಲಿ ಚೀನ ಏಕಪಕ್ಷೀಯವಾಗಿ ವರ್ತಿಸಿತ್ತು. ನಿಯಂತ್ರಣ ಗಡಿ ರೇಖೆಯಲ್ಲಿ ಚೀನ ದೊಡ್ಡ ಪ್ರಮಾಣದಲ್ಲಿ ಸೇನೆಯನ್ನು ವಿನ್ಯಾಸಗೊಳಿಸಿತ್ತು. ಭಾರತದ ಹಿತವನ್ನು ಸಂರಕ್ಷಿಸಲು ಭಾರತ ಕೂಡ ಸೇನಾ ಬಲವನ್ನು ಬಲಪಡಿಸಿತ್ತು ಎಂದು ಸಚಿವರು ಹೇಳಿದರು.