ಡೈರಿ ಉತ್ಪನ್ನ ತಯಾರಕ ‘ಕ್ವಾಲಿಟಿ’ ಕಂಪೆನಿಯಿಂದ 1,400 ಕೋಟಿ ರೂ. ವಂಚನೆ: ಸಿಬಿಐ ಕೇಸ್

0
752

ಸನ್ಮಾರ್ಗ ವಾರ್ತೆ

ನವದೆಹಲಿ: ದೇಶದ ಅತ್ಯಂತ ಜನಪ್ರಿಯ ಐಸ್ ಕ್ರೀಮ್, ಡೈರಿ ಉತ್ಪನ್ನ ತಯಾರಕರಲ್ಲಿ ಒಂದಾದ ‘ಕ್ವಾಲಿಟಿ ಲಿಮಿಟೆಡ್‌'(kwality) ಕಂಪೆನಿಯ ವಿರುದ್ಧ ಸಿಬಿಐ ಸೋಮವಾರ 1,400 ಕೋಟಿ ಮೊತ್ತದ ವಂಚನೆ ಪ್ರಕರಣ ದಾಖಲಿಸಿದೆ.

ಕ್ವಾಲಿಟಿ ಕಂಪೆನಿಯ ನಿರ್ದೇಶಕ ಸಂಜಯ್ ಧಿಂಗ್ರ, ಸಿದ್ದಾಂತ್ ಗುಪ್ತ ಹಾಗೂ ಅರುಣ್ ಶ್ರೀವಾಸ್ತವ ಸೇರಿದಂತೆ ಹಲವು ಜನರ ಹೆಸರಲ್ಲಿ ಸಿಬಿಐ ಪ್ರಕರಣದಲ್ಲಿ ದಾಖಲಿಸಿದೆ ಎಂಬುದಾಗಿ ವರದಿಯಾಗಿದೆ.

ಬ್ಯಾಂಕ್‌ ಆಫ್‌ ಇಂಡಿಯಾ ನೀಡಿರುವ ದೂರಿನ ಅನ್ವಯ ಸಿಬಿಐ ಪ್ರಕರಣ ದಾಖಲಿಸಿಕೊಂಡಿದ್ದು, ದೆಹಲಿ, ಬುಲಂದ್‌ಶಹರ್‌, ಅಜ್ಮೀರ್‌ ಹಾಗೂ ಪಲ್ವಾಲ್‌ ಸೇರಿದಂತೆ ಎಂಟು ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.

ತೆರಿಗೆ ವಿನಾಯಿತಿಗಾಗಿ ವಂಚನೆ, ಬ್ಯಾಂಕ್‌ ಫಂಡ್‌ಗಳನ್ನು ತಿರುಚುವಿಕೆ, ನಕಲಿ ದಾಖಲೆಗಳು ಮತ್ತು ರಶೀದಿಗಳನ್ನು ಸೃಷ್ಟಿ, ಹಾಗೂ ತಪ್ಪು ಲೆಕ್ಕಗಳನ್ನು ನಿರೂಪಿಸುವ ಮೂಲಕ ಬ್ಯಾಂಕ್‌ಗಳಿಗೆ ವಂಚನೆ ಮಾಡಿದೆ ಎಂಬ ಆರೋಪದ ಮೇಲೆ ಕ್ವಾಲಿಟಿ ಲಿಮಿಟೆಡ್ ವಿರುದ್ಧ ಬ್ಯಾಂಕ್ ಆಫ್ ಇಂಡಿಯಾ ದೂರು ನೀಡಿತ್ತು.