ಹಿಂದೊಮ್ಮೆ ಮುಸ್ಲಿಮರ ಸ್ಕಲ್ ಟೋಪಿ ಧರಿಸಲು ನಿರಾಕರಿಸಿದ್ದ ನರೇಂದ್ರ ಮೋದಿ..

0
798

 

ಏ. ಕೆ. ಕುಕ್ಕಿಲ

ಪೈಗಂಬರರ ಮೊಮ್ಮಗ ಇಮಾಮ್ ಹುಸೈನ್ ರ ಸ್ಮರಣಾರ್ಥ ದಾವೂದಿ ಬೊಹ್ರಾ ಸಮುದಾಯವು ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಸೈಫಿ ಮಸೀದಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇವತ್ತು ಭಾಗವಹಿಸಿದರು. ಇಮಾಮ್ ಹುಸೈನ್ ರು, “ಅಮನ್ ಔರ್ ಇನ್ಸಾಫ್ ಕೆ ಲಿಯೇ ಶಹೀದ್ ಹೋಗಯೇ” ಎಂದು ಹೊಗಳಿದರು. ಹುಸೈನ್ ಅವರ ಹೋರಾಟವು ಅಂದಿಗಿಂತಲೂ ಇಂದಿಗೆ ಹೆಚ್ಚು ಪ್ರಸ್ತುತ ಎಂದೂ ವ್ಯಾಖ್ಯಾನಿಸಿದರು. ನನಗೆ ಆ ಇಡೀ ಕಾರ್ಯಕ್ರಮದಲ್ಲಿ ಇಷ್ಟವಾದದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಬೊಹ್ರಾ ಸಮುದಾಯದ ನೇತಾರ ಸೈಯದ್ ಮುಫದ್ದಲ್ ಸೈಫುದ್ದೀನ್ ಅವರಿಬ್ಬರೂ ಆಸೀನವಾದ ರೀತಿ. ಸೈಫುದ್ದೀನ್ ಅವರು ವಿಶಾಲ ಆಸನದಲ್ಲಿ ವಿರಾಜಮಾನರಾಗಿದ್ದರೆ ಆ ಆಸನದ ಪಕ್ಕವೇ ಅದಕ್ಕಿಂತ ತುಸು ತಗ್ಗಿನಲ್ಲಿ ಇರಿಸಲಾದ ಸಾಮಾನ್ಯ ಕುರ್ಚಿಯಲ್ಲಿ ಪ್ರಧಾನಿ ಮೋದಿಯವರು ತಣ್ಣಗೆ ಕುಳಿತುಕೊಂಡಿದ್ದರು. ಪ್ರಧಾನಿಯಾಗಿದ್ದೂ ಅವರು ತೋರಿದ ಈ ಸೌಜನ್ಯ ನನಗೆ ಬಹಳವೇ ಇಷ್ಟವಾಯಿತು. ಅಂದಹಾಗೆ,
ಪ್ರಜಾತಂತ್ರ ವ್ಯವಸ್ಥೆಯನ್ನು ದಮನ ಮಾಡಿದ ಯಜೀದ್ ಬಿನ್ ಮುಆವಿಯ ಎಂಬ ನಿರಂಕುಶ ದೊರೆಯ ವಿರುದ್ಧ ಇಮಾಮ್ ಹುಸೈನ್ ಹೋರಾಡಿದ್ದರು.

 

LEAVE A REPLY

Please enter your comment!
Please enter your name here