ಬೈಡನ್‌ರಿ‌‌ಗೆ ಸೋಲುಣಿಸಲು ಪಿತೂರಿ:‌ ಅಧಿಕಾರಿಗೆ ಬೆದರಿಕೆ ಹಾಕಿದ ಟ್ರಂಪ್‍ರ ಫೋನ್ ರೆಕಾರ್ಡ್ ಬಹಿರಂಗ

0
596

ಸನ್ಮಾರ್ಗ ವಾರ್ತೆ

ಅಮೆರಿಕ: ರಿಪಬ್ಲಿಕನ್ ಆಳ್ವಿಕೆಯನ್ನು ಕೊನೆಗೊಳಿಸಿದ ಡೆಮಕ್ರಾಟಿಕ್ ಪಾರ್ಟಿ ಅಧಿಕಾರಕ್ಕೆ ಬರುವಂತೆ ಮಾಡಿದ ಜೊ ಬೈಡನ್ ಅಧ್ಯಕ್ಷ ಸ್ಥಾನ ಅಲಂಕರಿಸಲು ಕೆಲವೇ ದಿನಗಳಿರುವಾಗ ಡೊನಾಲ್ಡ್ ಟ್ರಂಪ್‍ರ ಅಧಿಕಾರ ದಾಹಕ್ಕೆ ಉದಾಹರಣೆಯೆಂಬಂತೆ ಟ್ರಂಪ್ ಬೆದರಿಕೆ ಹಾಕಿದ ಕರೆಯೊಂದರ ಧ್ವನಿಮುದ್ರಣವು ಬಹಿರಂಗವಾಗಿದೆ.

ಬೈಡನ್‍ಗೆ ಗೆಲ್ಲಲು ಹೆಚ್ಚು ಸಹಾಯ ಮಾಡಿದ ಜಾರ್ಜಿಯದ ಸ್ಟೇಟ್ ಸೆಕ್ರಟರಿ ಬ್ರಾಡ್ ರಾಫನ್‍ಸ್ಪರ್ಗರ್‌ಗೆ ಟ್ರಂಪ್ ಬೆದರಿಕೆ ಹಾಕಿ ಕರೆ ಮಾಡಿದ್ದು ಬಹಿರಂಗವಾಗಿದೆ. ಜಾರ್ಜಿಯದಲ್ಲಿ ಬೈಡನ್ ಗೆಲುವನ್ನು ದುರ್ಬಲಗೊಳಿಸಿ ತನ್ನನ್ನು ಗೆಲ್ಲುವಂತೆ ಮಾಡಬೇಕು. ಇದಕ್ಕೆ ಬೇಕಾದ ಮತಗಳನ್ನು ಸಂಗ್ರಹಿಸಿಕೊಡಬೇಕೆಂದು ಟ್ರಂಪ್ ಬೆದರಿಕೆ ಹಾಕಿದ್ದರು. ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಟ್ರಂಪ್ ಫೋನ್ ಕರೆಯ ಟೇಪ್ ಅನ್ನು ಪ್ರಕಟಿಸಿತ್ತು. ಇದನ್ನು ಟ್ರಂಪ್ ಟ್ವೀಟ್‍ನಲ್ಲಿ ದೃಢೀಕರಿಸಿದ್ದಾರೆ. ಇದು ಅವರಿಗೆ ಮಾತ್ರವಲ್ಲ ರಿಪಬ್ಲಿಕನ್ ಪಾರ್ಟಿಗೂ ಹಿನ್ನಡೆಯಾಗಿದೆ.

“ನನಗೆ ಒಟ್ಟು ಬೇಕಿರುವುದು ಒಂದೇ ವಿಷಯ. 11,780 ಮತಗಳನ್ನು ಸಂಗ್ರಹಿಸಿ ಕೊಡಬೇಕು. ನಾವು ರಾಜ್ಯದಲ್ಲಿ ಗೆದ್ದಿದ್ದೇವೆ. ಜಾರ್ಜಿಯದಲ್ಲಿ ನಾನು ಸೋಲಬೇಕಾದ್ದಿಲ್ಲ. ಲಕ್ಷಾಂತರ ಮತಕ್ಕೆ ಗೆದ್ದ ರಾಜ್ಯ ಅದು. ಈ ರೀತಿ ಟ್ರಂಪ್‍ರ ಮಾತು ಸಾಗುತ್ತಿದೆ. ಟ್ರಂಪ್‍ರ ನಂಬಿಕಸ್ಥ ರಾಫೆನ್ಸ್ಪರ್ಗರ್ ಸ್ಟೇಟ್ ಸೆಕ್ರಟರಿಯಾಗಿರುವ ಜಾರ್ಜಿಯಾದಲ್ಲಿ ಭಾರೀ ಪ್ರಚಾರ ಮಾಡಿದರೂ 28 ವರ್ಷದ ಬಳಿಕ ಮೊದಲ ಬಾರಿ ರಿಪಬ್ಲಿಕನ್ ಪಾರ್ಟಿ ಸೋತು ಡೆಮಕ್ರಾಟಿಕ್ ಪಾರ್ಟಿ ಗೆದ್ದಿದೆ. ಇದು ಟ್ರಂಪ್‍ರ ಆಕ್ರೋಶಕ್ಕೆ ಕಾರಣವಾಗಿದೆ.

ಜಾರ್ಜಿಯದಲ್ಲಿ ಟ್ರಂಪ್ ಆಡಿದ ಆಟದಿಂದ ನಾಚಿಗೆಕೆಟ್ಟು ಅವರು ಅಧಿಕಾರದಿಂದ ಕೆಳಗಿಳಿಯುವಂತಾಗಿದೆ. ರಿಪಬ್ಲಿಕ್ ಪಾರ್ಟಿಗೆ ಮೇಲುಗೈಯಿರುವ ಸೆನೆಟ್‍ಅನ್ನು ಉಪಯೋಗಿಸಿ ಅಧಿಕಾರ ಉಳಿಸಿಕೊಳ್ಳಲು ಟ್ರಂಪ್ ನೋಡಿದ್ದರು. ಹನ್ನೆರಡು ಬೈಡನ್‌‌ಗೆ ಸೋಲುಣಿಸಲುಟ್ರಂಪ್ ಜೊತೆ ಸೇರಿ ಆಡಿದ ಆಟ ಕೂಡ ವಿಫಲವಾಗಿದೆ. ಇಲೆಕ್ಟ್ರಾಲ್ ಕಾಲೇಜು ಗೆಲುವಿಗೆ ಅಮೆರಿಕ ಕಾಂಗ್ರೆಸ್‍ ಬುಧವಾರ ಅಂಗೀಕಾರ ನೀಡಲಿದೆ.