ಪುದುಚೇರಿ: ಎನ್‍ಡಿಎಯಿಂದ ಹೊರ ನಡೆದ ಎನ್‍ಆರ್ ಕಾಂಗ್ರೆಸ್

0
474

ಸನ್ಮಾರ್ಗ ವಾರ್ತೆ

ಚೆನ್ನೈ: ಮುಖ್ಯಮಂತ್ರಿ ಸ್ಥಾನದ ಕುರಿತ ವಿವಾದದಲ್ಲಿ ಎನ್ ರಂಗಸ್ವಾಮಿಯವರ ನೇತೃತ್ವದ ಎನ್.ಆರ್ ಕಾಂಗ್ರೆಸ್ ಎನ್‍ಡಿಎಯಿಂದ ಹೊರ ನಡೆದಿದೆ. ಇದರ ಅಧಿಕೃತ ಘೋಷಣೆ ಶೀಘ್ರ ಹೊರಬರಲಿದ್ದು, ಕಳೆದ ದಿವಸ ಪುದುಚೇರಿಗೆ ಬಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿಯ ನೇತೃತ್ವದಲ್ಲಿ ಸರಕಾರ ರೂಪಿಸಲಾಗುವುದು ಎಂದು ಘೋಷಿಸಿದ್ದರು.

ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದೆ. ಎ. ನಮಶ್ಶಿವಾಯರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿಸಿ ಪ್ರಚಾರ ಮಾಡುವ ಉದ್ದೇಶವನ್ನು ಅವರು ಹೊರಗೆಡಹಿದ್ದರು. ಪುದುಚೇರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ನಮಶ್ಶಿವಾಯರನ್ನು ಅಮಿತ್ ಶಾ ಹೊಗಳಿ ಮಾತಾಡಿದ್ದರು.
ಎನ್‍ಡಿಎ ಸಖ್ಯದ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಸ್ಪಷ್ಟತೆ ಬೇಕೆಂದು ಎನ್. ರಂಗಸ್ವಾಮಿ ಬಿಜೆಪಿ ನಾಯಕರನ್ನು ಸಂಪರ್ಕಿಸಿದ್ದರು. ಚುನಾವಣೆಯ ನಂತರ ತೀರ್ಮಾನ ತೆಗೆದುಕೊಳ್ಳುವ ಸೂಚನೆ ನೀಡಲಾಗಿತ್ತು. ನಾರಾಯಣ ಸ್ವಾಮಿ ಸರಕಾರವನ್ನು ಕೆಳಗೆ ಹಾಕಿದ ನಂತರ ನಡೆದ ಚರ್ಚೆಯಲ್ಲಿ ಎನ್‍.ಆರ್ ಕಾಂಗ್ರೆಸ್ ಹದಿನೈದು, ಅಣ್ಣಾ ಡಿಎಂಕೆ ಆರು, ಬಿಜೆಪಿ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಲು ತೀರ್ಮಾನವಾಗಿತ್ತು.

ಆದರೆ, ಅಮಿತ್ ಶಾ ಸಂದರ್ಶನದ ನಂತರ ಇದು ಬುಡಮೇಲಾಗಿದೆ. ಕಾಂಗ್ರೆಸ್ ಸರಕಾರವನ್ನು ಕೆಡವಲು ಸಹಾಯ ಮಾಡಿದ ಮಾಜಿ ಮುಖ್ಯಮಂತ್ರಿ ಎನ್. ರಂಗಸ್ವಾಮಿಯವರನ್ನು ಬಿಜೆಪಿ ಕೊನೆಯಲ್ಲಿ ಕೈಬಿಟ್ಟಿತು. ಎನ್‍.ಆರ್ ಕಾಂಗ್ರೆಸ್ ಅನ್ನು ದೂರ ಇಟ್ಟು ಅಣ್ಣಾ ಡಿಎಂಕೆಯೊಂದಿಗೆ ಮಾತ್ರ ಸಖ್ಯ ಮಾಡಿಕೊಂಡು ಚುನಾವಣೆ ಎದುರಿಸುವುದು ಬಿಜೆಪಿಯ ಈಗಿನ ತಂತ್ರವಾಗಿದೆ. ಈ ಹಿಂದೆ ಕಾಂಗ್ರೆಸ್‍ಗೆ ರಾಜೀನಾಮೆ ಕೊಟ್ಟ ಶಾಸಕರೆಲ್ಲ ಅಮಿತ್ ಶಾರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.