ಪೊಲೀಸ್ -ವಕೀಲರ ಘರ್ಷಣೆ; ಮಹಿಳಾ ಐಪಿಎಸ್ ಅಧಿಕಾರಿಗೆ ಹಲ್ಲೆ- ಮಹಿಳಾ ಆಯೋಗದಿಂದ ಕೇಸು ದಾಖಲು

0
538

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.9: ದಿಲ್ಲಿ ತೀಸ್ ಹಝಾರಿ ಕೋರ್ಟಿನಲ್ಲಿ ನಡೆದ ಪೊಲೀಸ್-ವಕೀಲರ ಘರ್ಷಣೆಯಲ್ಲಿ ಮಹಿಳಾ ಐಪಿಎಸ್ ಅಧಿಕಾರಿಗೆ ಹಲ್ಲೆ ನಡೆದಿದ್ದು ಬಂದೂಕು ವಶಪಡಿಸಿಕೊಳ್ಳಲಾಗಿತ್ತು.

ಡಿಸಿಪಿ ಮೋನಿಕಾ ಭಾರದ್ವಾಜ್‍ರಿಗೆ ವಕೀಲರು ಹಲ್ಲೆ ನಡೆಸಿದ್ದರು. ಘಟನೆಯಲ್ಲಿ ದೂರು ನೀಡಲಾಗಿಲ್ಲದಿದ್ದರು ಐಪಿಎಸ್ ಅಧಿಕಾರಿಗೆ ಹೊಡೆಯುವ ದೃಶ್ಯಗಳು ಬಹಿರಂಗವಾಗಿತ್ತು. ಮಹಿಳಾ ಅಧಿಕಾರಿಗೆ ಹಲ್ಲೆ ನಡೆಸಿದ ವಕೀಲರ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ನೋಟಿಸು ಜಾರಿ ಮಾಡಿದ್ದಾರೆ.

ಉನ್ನತ ಪೊಲೀಸಧಿಕಾರಿಗಳೇ ವಕೀಲರ ವಿರುದ್ಧ ಕೇಸು ದಾಖಲಿಸಲು ಹಿಂಜರಿದಿದ್ದರು. ದಿಲ್ಲಿ ಹೈಕೋರ್ಟು ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸಧಿಕಾರಿಗಳನ್ನು ವರ್ಗಾಯಿಸಲು ಆದೇಶಿಸಿತ್ತು.

ಕೋರ್ಟು ಬಹಿಷ್ಕರಿಸುವ ವಕೀಲರ ಪ್ರತಿಭಟನೆಯ ವಿರುದ್ಧ ಸುಪ್ರೀಂಕೋರ್ಟು ರಂಗಪ್ರವೇಶಿಸಿ ತೀವ್ರ ತರಾಟೆಗೆತ್ತಿಕೊಂಡಿತ್ತು. ಕೋರ್ಟು ಪ್ರಕ್ರಿಯೆಗೆ ಅಡ್ಡಿಯಾಗದಂತೆ ಕ್ರಮ ಜರಗಿಸಲು ಸುಪ್ರೀಂಕೋರ್ಟು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರರಿಗೆ ಸೂಚಿಸಿದೆ.