ಪೌರತ್ವ ಪಟ್ಟಿ: ಬಿಜೆಪಿಯೇತರ ಮುಖ್ಯಮಂತ್ರಿಗಳು ನಿಲುವು ಕೈಗೊಳ್ಳಬೇಕು-ಪ್ರಶಾಂತ್ ಕಿಶೋರ್

0
755

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಡಿ. 13: ಬಿಜೆಪಿಯೇತರ ಪಾರ್ಟಿಗಳ ಮುಖ್ಯಮಂತ್ರಿಗಳು ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಬಲವಾದ ತೀರ್ಮಾನಕ್ಕೆ ಬರಬೇಕೆಂದು ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಹೇಳಿದರು. ಭಾರತದ 16 ಬಿಜೆಪಿಯೇತರ ಮುಖ್ಯಮಂತ್ರಿಗಳು ಭಾರತದಾತ್ಮವನ್ನು ಸಂರಕ್ಷಿಸಲು ಮುಂದೆ ಬರಬೇಕೆಂದು ಅವರು ಹೇಳಿದರು.

ಪಾರ್ಲಿಮೆಂಟಿನಲ್ಲಿ ಬಹುಮತ ಸಿಕ್ಕಿದೆ.ಇನ್ನು ನ್ಯಾಯಾಂಗಕ್ಕೆ ಭಾರತದ ಆತ್ಮವನ್ನು ಸಂರಕ್ಷಿಸುವ ಹೊಣೆಯಿದೆ. ಈ ಕಾನೂನು ಜಾರಿಗೊಳಿಸಬೇಕಾಗುವ ಹದಿನಾರು ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳು ನಿರ್ಧಾರಕ್ಕೆ ಬರಬೇಕು. ಪಂಜಾಬ್, ಕೇರಳ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಪೌರತ್ವ ತಿದ್ದುಪಡಿ ಮತ್ತು ಎನ್‍ಆರ್‍ಸಿಯನ್ನು ವಿರೋಧಿಸಿದ್ದಾರೆ. ಇತರರು ನಿಲುವನ್ನು ವ್ಯಕ್ತಪಡಿಸಬೇಕೆಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ.

ಪಾರ್ಲಿಮೆಂಟಿನಲ್ಲಿ ಜೆಡಿಯು ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿ ಮತಹಾಕಿದೆ. ನಂತರ ಪಾರ್ಟಿಯ ನಿಲುವಿನ ವಿರುದ್ಧ ಪ್ರಶಾಂತ್ ಕಿಶೋರ್ ರಂಗಪ್ರವೇಶಿಸಿದ್ದರು. ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವುದು, ಆರೋಪ ಹೊರಿಸಲು ಸಾಧ್ಯವಾಗುವ ರೀತಿಯಲ್ಲಿ ಜನರನ್ನು ವಿಭಜಿಸುವುದಕ್ಕೆ ಸರಕಾರದ ಕೈಯಲ್ಲಿರುವ ಮಾರಕ ಅಸ್ತ್ರವಾಗಿದೆ ಎಂದು ಪೌರತ್ವ ತಿದ್ದುಪಡಿ ಮಸೂದೆಯನ್ನು ಕಿಶೋರ್ ವಿಶ್ಲೇಷಿಸಿದ್ದಾರೆ.