ಸೋನಾಭದ್ರ ಗ್ರಾಮದಲ್ಲಿ 10 ಮಂದಿ ಹತ್ಯೆ ಘಟನೆ: ಸಂದರ್ಶನಕ್ಕೆ ತೆರಳಿದ ಪ್ರಿಯಾಂಕಾ ಗಾಂಧಿ ಬಂಧನ -ವೀಡಿಯೊ

0
408

ಹೊಸದಿಲ್ಲಿ, ಜು.19: ಉತ್ತರಪ್ರದೇಶದ ಸೋನಾಭದ್ರ ಗ್ರಾಮದಲ್ಲಿ ಗುಂಡು ಹಾರಾಟ ನಡೆದ ಸ್ಥಳಕ್ಕೆ ಹೊರಟಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮವನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಭಟಿಸಿ ಟ್ವೀಟ್ ಮಾಡಿದ್ದು ಪ್ರಿಯಾಂಕಾರ ಬಂಧನ ಕಾನೂಬಾಹಿರವಾಗಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿರುವ ಅಸುರಕ್ಷಿತ ಪರಿಸ್ಥಿತಿಯನ್ನು ಇದು ಸೂಚಿಸುತ್ತಿದೆ. ಅಧಿಕಾರದ ಏಕಪಕ್ಷೀಯ ಪ್ರಯೋಗ ಇದು ಎಂದು ರಾಹುಲ್ ಹೇಳಿದರು.

ಉತ್ತರ ಪ್ರದೇಶದ ಸೋನಾಭದ್ರ ಗ್ರಾಮದಲ್ಲಿ ನಡೆದ ಗುಂಡು ಹಾರಾಟದಲ್ಲಿ ಮೃತಪಟ್ಟವರನ್ನು ಸಂದರ್ಶಿಸಲು ಬಂದಿದ್ದ ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದ ಪೊಲೀಸರು ತಡೆದಿದ್ದಾರೆ. ಇದನ್ನು ಪ್ರತಿಭಟಿಸಿ ಧರಣಿ ಕುಳಿತ ಪ್ರಿಯಾಂಕಾರನ್ನು ಹಾಗೂ ಕಾಂಗ್ರೆಸ್ ನಾಯಕರನ್ನು ನಂತರ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಗುಂಡು ಹಾರಾಟದಲ್ಲಿ ಮೃತಪಟ್ಟವರ ಕುಟುಂಬ ಸಂದರ್ಶಿಸಲು ತಾನು ಅಲ್ಲಿಗೆ ಹೋಗಿದ್ದೆ. ತನ್ನ ಪುತ್ರನ ವಯಸ್ಸಿನ ಓರ್ವ ಮಗು ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದೆ. ತನ್ನನ್ನು ತಡೆಹಿಡಿದ ಕಾರಣವನ್ನು ಉತ್ತರಪ್ರದೇಶದ ಪೊಲೀಸರು ಸ್ಪಷ್ಟಪಡಿಸಬೇಕು ಎಂದು ಪ್ರಿಯಾಂಕಾ ಹೇಳಿದ್ದಾರೆ.

ಜಮೀನು ವಿವಾದದ ನಂತರ ಗ್ರಾಮ ಮುಖ್ಯಸ್ಥನ ನೇತೃತ್ವದಲ್ಲಿ ಬಂದ ತಂಡ ನಡೆಸಿದ ಗುಂಡು ಹಾರಾಟದಲ್ಲಿ ಮೂವರು ಮಹಿಳೆಯರ ಸಹಿತ ಹತ್ತು ಮಂದಿ ಗ್ರಾಮಸ್ಥರು ಸೋನಾಭದ್ ರಗ್ರಾಮದಲ್ಲಿ ಮೃತಪಟ್ಟಿದ್ದಾರೆ.