ಇಸ್ರೇಲ್ ವಿರೋಧಿ ಪ್ರತಿಭಟನೆಗೆ ಅಂಜಿ ಪದವಿ ಪ್ರದಾನ ಸಮಾರಂಭವನ್ನೇ ರದ್ದು ಪಡಿಸಿತೇ ಕೊಲಂಬಿಯಾ ಯೂನಿವರ್ಸಿಟಿ?

0
180

ಸನ್ಮಾರ್ಗ ವಾರ್ತೆ

ಗಾಝಾದ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಯುದ್ಧದ ವಿರುದ್ಧ ಅಮೆರಿಕಾದ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.

ಈ ನಡುವೆ ಪ್ರತಿಭಟನೆಗೆ ಹೆದರಿರುವ ಕೊಲಂಬಿಯಾ ಯೂನಿವರ್ಸಿಟಿಯು ತನ್ನ ಪದವಿ ಪ್ರಧಾನ ಸಮಾರಂಭವನ್ನೇ ರದ್ದುಗೊಳಿಸಿದೆ.

ಹಳೆ ವಿದ್ಯಾರ್ಥಿಗಳಿಗೆ ಮೇ 15ರಂದು ಪದವಿ ಪ್ರಧಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು ಮತ್ತು ಅದರ ಜೊತೆಗೆ ಹೊಸ ವಿದ್ಯಾರ್ಥಿಗಳ ಸ್ವಾಗತಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೊಲಂಬಿಯ ವಿಶ್ವವಿದ್ಯಾಲಯವೂ ಸೇರಿ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದು ಪದವಿ ಪ್ರಧಾನ ಸಮಾರಂಭಕ್ಕೆ ಈ ಪ್ರತಿಭಟನೆಗಳು ಅಡ್ಡಿಯಾಗಬಹುದು ಅನ್ನುವ ಅಭಿಪ್ರಾಯದೊಂದಿಗೆ ಸಮಾರಂಭವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಏಪ್ರಿಲ್ ಮಧ್ಯಭಾಗದಲ್ಲಿ ಆರಂಭವಾದ ಇಸ್ರೇಲ್ ವಿರೋಧಿ ಪ್ರತಿಭಟನೆ ಇದೀಗ ಅಮೆರಿಕಾದ 140 ವಿಶ್ವವಿದ್ಯಾಲಯದ ಕ್ಯಾಂಪಸ್ ಗಳಿಗೆ ಹರಡಿದೆ ಎಂದು ಬಿಬಿಸಿ ವರದಿ ಮಾಡಿದೆ. ಈ ವರೆಗೆ 2500 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here