ರಮಝಾನ್: ಹತ್ತು ವರ್ಷಗಳಿಂದ ಉಪವಾಸ ವ್ರತ ಆಚರಿಸುತ್ತಾ ಬಂದಿರುವ ಸತೀಶ್ ಬಾಬು

0
758

ಜಿದ್ದಾ,ಮೇ 17: ಶರಫಿಯ್ಯದ ಖಾಸಗಿ ಸೇವಾ ಸಂಸ್ಥೆಯಲ್ಲಿ ಕೆಲಸದಲ್ಲಿರುವ ಕೇರಳದ ಸತೀಶ್ ಬಾಬು ಕಳೆದ ಹತ್ತು ವರ್ಷಗಳಿಂದ ತಪ್ಪದೆ ಉಪವಾಸ ಹಿಡಿಯುತ್ತಾರೆ. ಅವರ ಜೊತೆ ವಾಸವಿರುವ ಸಿದ್ದೀಕ್, ಅನ್ವರ್, ಕುಂಞುಟ್ಟಿ, ಕುಂಞಿ ಬಾವ , ಅಬ್ದುನ್ನಾಸರ್‍‌ರ ಜೊತೆಗೆ ದಿನಾಲೂ ಸಹರಿ ಮಾಡುವರು ಮತ್ತು ಜೊತೆಯಲ್ಲೇ ಉಪವಾಸ ತೊರೆಯುವರು.

ಇವರು ಹದಿನೇಳು ವರ್ಷಗಿಂದ ಜಿದ್ದದಲ್ಲಿದ್ದು ಒಳ್ಳೆಯ ಅಡಿಗೆ ಮಾಡಬಲ್ಲರು. ಉಪವಾಸ ಹಿಡಿಯುವುದರಿಂದ ಮನಸ್ಸು ಶರೀರಕ್ಕೆ ಉತ್ಸಾಹ ಸಿಗುತ್ತದೆ ಇದು ತನ್ನ ಅನುಭವ ಎಂದು ಬಾಬು ಹೇಳಿದರು. ಗೆಳೆಯರು ಉಪವಾಸ ಹಿಡಿಯುವುದನ್ನು ನೋಡಿ ಒಂದು ದಿವಸ ತಾನು ಉಪವಾಸ ಹಿಡಿದರು. ನಂತರ ಎಲ್ಲ ವರ್ಷವೂ ಉಪವಾಸ ಹಿಡಿಯತೊಡಗಿದರು. ಸದ್ಯ ಈದ್ ಆಚರಿಸಲು ಊರಿಗೆ ಹೋಗುವ ಸಿದ್ಧತೆ ನಡೆಸುತ್ತಿರುವ ಸತೀಶ್ ಪತ್ನಿ ಮೂವರು ಮಕ್ಕಳನ್ನೊಳಗೊಂಡ ಕುಟುಂಬ ಹೊಂದಿದ್ದಾರೆ.