ಕಾಶ್ಮೀರದಲ್ಲಿ ಗುಂಡು ಹಾರಾಟ: ಯೋಧನ ಸಾವು; ಇಬ್ಬರ ಸ್ಥಿತಿ ಗಂಭೀರ

0
302

ಸನ್ಮಾರ್ಗ ವಾರ್ತೆ

ಕಾಶ್ಮೀರ,ಜು.1: ಜಮ್ಮು ಕಾಶ್ಮೀರದ ಸೋಪೊರಿನಲ್ಲಿ ಸಿ.ಆರ್.ಪಿ.ಎಫ್ ತಂಡದ ಮೇಲೆ ನಡೆದ ಗುಂಟು ಹಾರಾಟದಲ್ಲಿ ಒಬ್ಬ ಯೋಧ ವೀರಮೃತ್ಯುವನ್ನಪ್ಪಿದ್ದು, ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡರು. ಓರ್ವ ಸ್ಥಳೀಯನಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.

ಬುಧವಾರ ಬೆಳಗ್ಗೆ ಪಟ್ರೋಲಿಂಗ್ ಮಾಡುತ್ತಿದ್ದ ಸಿಆರ್‌ಪಿಎಫ್ ತಂಡದ ಮೇಲೆ ಗುಂಡು ಹಾರಾಟ ನಡೆದಿದೆ. ಇಬ್ಬರು ಯೋಧರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.