ನ್ಯೂಯಾರ್ಕ್‌ನಲ್ಲಿ ಗುಂಡು ಹಾರಾಟ: ಇಬ್ಬರ ಸಾವು,14 ಮಂದಿಗೆ ಗಾಯ

0
404

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್,ಸೆ.20: ಅಮೆರಿಕದ ರೊಚ‌ಸ್ಟರ್‌‌ನಲ್ಲಿ ಶನಿವಾರ ಬೆಳಗ್ಗೆ ಪಾರ್ಟಿ ನಡೆಯುತ್ತಿದ್ದ ವೇಳೆ ಗುಂಡು ಹಾರಾಟ ನಡೆದಿದ್ದು ಇಬ್ಬರು ಮೃತಪಟ್ಟಿದ್ದಾರೆ. ಹದಿನಾಲ್ಕು ಮಂದಿ ಗಾಯಗೊಂಡಿದ್ದಾರೆ. ನೂರಾರು ಮಂದಿ ಪಾರ್ಟಿಯಲ್ಲಿ ಭಾಗವಹಿಸಿದ್ದರು.

ಗುಂಡಿನ ಘರ್ಷಣೆಯಲ್ಲಿ ಯುವತಿ ಮತ್ತು ಯುವಕ ಮೃತಪಟ್ಟರೆಂದು ಪೊಲೀಸರು ಹೇಳಿದ್ದಾರೆ. ಆದರೆ ಗುಂಡು ಹಾರಾಟ ನಡೆಸಿದ್ದು, ಯಾರೆಂದು ಪೊಲೀಸರಿಗೆ ಖಚಿತವಾಗಿಲ್ಲ. ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.