ರಾಮ ನವಮಿ ಆಚರಣೆಯ ಬಳಿಕದ ಹಿಂಸೆ, 2019ರ ಲೋಕಸಭಾ ಚುನಾವಣೆಯ ಭೂಮಿಕೆಯೇ?

0
1095

: ಸಲೀಮ್ ಬೋಳಂಗಡಿ
ಕಳೆದೊಂದು ವಾರದಲ್ಲಿ ರಾಮನವಮಿ ಆಚರಣೆಯ ಬಳಿಕ ನಡೆದ ಕೋಮು ಹಿಂಸಾಚಾರಗಳನ್ನು ಗಮನಿಸಿದರೆ 2019ರ ಲೋಕಸಬಾ ಚುನಾವಣೆಗೆ ಸಂಘ ಪರಿವಾರ ಭೂಮಿಕೆ ಸಿದ್ದಪಡಿಸುತ್ತಿದೆಯೇ ಎಂಬ ಅನುಮಾನ ಈ ದೇಶದ ಜನರಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ. ಯಾಕೆಂದರೆ ಬಿಜೆಪಿಯ ಅದ್ಯಕ್ಷ ದಿಲೀಪ್ ಘೋಶ್ ಎಂಬವರು ಮೆರವಣಿಗೆಯಲ್ಲಿ ಖಡ್ಗವೆತ್ತಿ ಹಿಡಿದು ಬಹಿರಂಗವಾಗಿ ಕಾನೂನು ಉಲ್ಲಂಘಿಸಿದ್ದರು. ಮತ್ತೋರ್ವ ಸಂಸದ, ಕೇಂದ್ರ ಸಹಾಯಕ ಸಚಿವ ಬಾಬುಲ್ ಸುಪ್ರಿಯಾ ಎಂಬವರು ಪ್ರಚೋದನಾತ್ಮಕ ರೀತಿಯಲ್ಲಿ ಮಾತನಾಡಿ ” “ಅವರನ್ನು(ಮುಸ್ಲಿಮರನ್ನು) ಜೀವಂತವಾಗಿ ಅಗ್ನಿಗಾಹುತಿ ಮಾಡಿ” ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಇವರ ವಿರುದ್ದ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಇಂತಹವರನ್ನು ಸಂಸದರನ್ನಾಗಿ ಆರಿಸಿದರೆ ದೇಶದ ಪರಿಸ್ತಿತಿ ಏನಾಗಬಹುದು. ಇದರಿಂದ ಅದೆಷ್ಟೋ ಮನೆಗಳು, ಅಂಗಡಿ ಮುಂಗಟ್ಟುಗಳು ಅಲ್ಲಿ ಭಸ್ಮವಾದವು ಹನ್ನೆರಡು ಅಮಾಯಕ ಜೀವಗಳ ಹರಣವಾದವು. ರಾಮನವಮಿ ಪ್ರಯುಕ್ತ ಪಶ್ಚಿಮ ಬಂಗಾಳದಲ್ಲಿ ಅರುವತ್ತು ರಾಲಿಗಳನ್ನು ಆಯೋಜಿಸಲಾಗಿತ್ತು. ಆವುಗಳಲ್ಲಿ ಹೆಚ್ಚಿನವು ಹಿಂಸೆಯಲ್ಲಿಯೇ ಮುಕ್ತಾಯ ಕಂಡಿತ್ತು.


ಆಡಳಿತಾವಧಿಯಲ್ಲಿ ಏನೂ ಜನಪರ ಕೆಲಸ ಮಾಡದೆ ಸೋಮಾರಿಯಾಗಿದ್ದು ಕಾರ್ಪರೇಟ್ ದೊರೆಗಳ ಹಿತ ಕಾಯ್ದುಕೊಂಡು ಕಾಲ ಕಳೆಯುವವರಿಗೆ ಮತ್ತೆ ಅಧಿಕಾರ ಪಡೆಯಬೇಕಾದರೆ ಕೋಮು ಗಲಭೆ ಅನಿವಾರ್ಯವಾಗಿದೆ. ಇದು ಮತ ಗಳಿಸುವ ಸುಲಭ ತಂತ್ರ ಎಂಬುದು ಅವರ ಅನುಭವಕ್ಕೆ ಬಂದಿದೆ. ಆದ್ದರಿಂದಲೇ ಜನರ ಭಾವನೆಗಳಿಗೆ ಬೆಂಕಿ ತುಂಬಿಸಿ ಪ್ರಚೋದಿಸಿ ಮೈ ಕಾಯಿಸುವ ಹಳೆಯ ತಂತ್ರದ ಮೊರೆ ಹೋಗುವ ಸೂಚನೆಯಿದು. ಅದರ ಪ್ರಯೋಗ ಈಗಾಗಲೇ ಪ್ರಾರಂಭವಾಯಿತು. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅಭಿವೃದ್ದಿಯ ಮಂತ್ರಕ್ಕೆ ಮಂತ್ರಮುಗ್ದರಾಗಿ ಮತ ಚಲಾಯಿಸಿದ ಮತದಾರನಿಗೆ ಕೇಂದ್ರ ಬೆಲೆಯೇರಿಕೆಯ ಉಡುಗೊರೆ ನೀಡವಲ್ಲಿ ಯಶಸ್ವಿಯಾಯಿತು. ಇನ್ನು ಆ ಬಗ್ಗೆ ಯಾರಾದರೂ ಪ್ರಶ್ನಿಸುವ ಸಿದ್ದತೆಯಲ್ಲಿ ತೊಡಗಿಸಬೇಕೆಂದಿರುವಾಗ ಅವರ ತಲೆಗೆ ಮತಾಂಧತೆಯನ್ನು ತುಂಬಿ ಪ್ರಚೋದಿಸಲಾಗುತ್ತದೆ. ಮುಂದಿನ ಒ೦ದು ವರ್ಷ ಯಾವೆಲ್ಲಾ ಅನಾಹುತಗಳಿಗೆ ಈ ದೇಶ ಸಾಕ್ಷಿಯಾಗಬೇಕೋ?