ಶುಕ್ರವಾರ ಪ್ರಾರ್ಥನೆಗಾಗಿ ಮುಸ್ಲಿಂ  ಶಿಕ್ಷಕರಿಗೆ ಅನುಮತಿ  ಇಲ್ಲ ಎಂದ ದೆಹಲಿ ಸರ್ಕಾರ 

0
1187

ಹೊಸದಿಲ್ಲಿ: ಶಾಲಾ ಅವಧಿಯಲ್ಲಿ ಜುಮಾ ಪ್ರಾರ್ಥನೆಗಾಗಿ ಮುಸ್ಲಿಮ್ ಶಿಕ್ಷಕರಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ದೆಹಲಿ ಅಲ್ಪಸಂಖ್ಯಾತ ಆಯೋಗಕ್ಕೆ (ಡಿಎಂಸಿ) ದೆಹಲಿ ಸರಕಾರ ತಿಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಶಿಕ್ಷಕರು “ತಮ್ಮ ತರಗತಿಗಳನ್ನು ಬಿಟ್ಟು ಹೋಗಬಾರದು ” ಮತ್ತು ಶುಕ್ರವಾರದ ಜುಮಾ ನಮಾಝಿಗೆ ಹೋಗುವುದು “ವಿದ್ಯಾರ್ಥಿಗಳ ಹಿತಾಸಕ್ತಿಗಳಿಗೆ ಹಾನಿ” ಎಂದು ದೆಹಲಿ ಸರ್ಕಾರದ ಶಿಕ್ಷಣ ಇಲಾಖೆಯು ಲಿಖಿತ ಪ್ರತಿಕ್ರಿಯೆ ನೀಡಿದೆ ಎಂದು ಡಿಎಂಸಿ ಅಧ್ಯಕ್ಷ ಝರಾಫುಲ್ ಇಸ್ಲಾಮ್ ಖಾನ್ ಐಎಎನ್ಎಸ್ ಗೆ  ತಿಳಿಸಿದ್ದಾರೆ.
ಅವರು (ಶಿಕ್ಷಣ ಇಲಾಖೆ) ನಿಯಮಗಳನ್ನು ಸಡಿಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಮತ್ತು ಶಿಕ್ಷಕರು ಮಧ್ಯಾಹ್ನ  1 ಗಂಟೆಗೆ  ಪ್ರಾರಂಭವಾಗುವ ತರಗತಿಗಳಿಗೆ 12.45  ಶಾಲೆಗೆ ತಲುಪಬೇಕಾಗಿದೆ ಎಂದು ಖಾನ್ ಹೇಳಿದರು.