ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ .: ಕೊರೊನ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಕತಾರ್ ಅಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿಯವರರೊಂದಿಗೆ ಫೋನಿನಲ್ಲಿ ಚರ್ಚಿಸಿದ್ದು, ಕತಾರ್ ನಲ್ಲಿರುವ ಇಂಡಿಯನ್ ಸಮುದಾಯದ ಸುರಕ್ಷತೆಯ ವಿಷಯದಲ್ಲಿ ಕಾಳಜಿ ತೋರಿಸಿದ ಖಲೀಫಾ ರ ಕ್ರಮಕ್ಕೆ ಪ್ರಧಾನಿ ಕ್ರತಜ್ನತೆ ಸೂಚಿಸಿದರು. ಕೋರೋನ ಆತಂಕ ಇರುವುದರಿಂದ ಭಾರತೀಯರ ಸುರಕ್ಷಿತತೆ ದ್ರಢ ಪಡಿಸಲಾಗುವುದು ಎಂದು ಅಮಿರ್ ಭರವಸೆ ನೀಡಿದರು.
ಜಾಗತಿಕ ದುರಂತವಾಗಿ ಬದಲಾಗಿರುವ ಕೊರೊನ ವೈರಸ್ ನಿಂದ ಆರ್ಥಿಕ ಸಾಮಾಜಿಕ ಆಘಾತಗಳು ಉಂಟಾಗಿವೆ ಮತ್ತು ಇದರ ಪರಿಹಾರಕ್ಕೆ ಶ್ರಮಿಸುವುದಾಗಿ ಇಬ್ಬರೂ ನಾಯಕರು ಭರವಸೆ ನೀಡಿದ್ದಾರೆ. ಸೌದಿ ದೊರೆ ಸಲ್ಮಾನ್ ರ ಅಧ್ಯಕ್ಷತೆಯಲ್ಲಿ ಕಳೆದ ದಿನ ನಡೆದ ಜಿ-೨೦ ಶೃಂಗದಲ್ಲಿ ಪರಸ್ಪರ ಒಗ್ಗೂಡಿ ಕೊರೊನ ಮೂಲೋತ್ಪಾಟನೆಗೆ ಶ್ರಮಿಸುವ ಅಗತ್ಯವನ್ನು ಪ್ರಧಾನಿ ಎತ್ತಿ ಹಿಡಿದಿದ್ದರು. ಆರ್ಥಿಕ ಎಂಬುದಕ್ಕಿಂತಲೂ ಪರಿಸರ, ಆರೋಗ್ಯ ಕ್ಷೇತ್ರ ಮುಂತಾದ ಕ್ಷೇತ್ರಗಳ ಕೆಲಸವನ್ನು ಏಕೀಕರಿಸಬೇಕೆಂದು ಪ್ರಧಾನಿ ಆಗ್ರಹಿಸಿದ್ದರು.












