10 ವರ್ಷದ ಬಾಲಕನ ಟೀಶರ್ಟ್‍ನಲ್ಲಿ ಹಾವಿನ ಚಿತ್ರ: ವಿಮಾನಕ್ಕೆ ಹತ್ತಲು ಬಿಡದ ಅಧಿಕಾರಿಗಳು

0
687

ಸನ್ಮಾರ್ಗ ವಾರ್ತೆ-
ಜೋಹಾನ್ಸ್ ಬರ್ಗ್, ಜ.3: ಹಾವಿನ ಚಿತ್ರ ಇರುವ ಟಿಶರ್ಟ್ ಧರಿಸಿ ಬಂದ ಸ್ಟೀವ್ ಲುಕಾಸ್ ಎಂಬ ಹತ್ತು ವರ್ಷದ ಹುಡುಗನ್ನು ವಿಮಾನಕ್ಕೆ ಏರಲು ಬಿಡದೆ ಭದ್ರತಾ ಅಧಿಕಾರಿಗಳು ತಡೆದಿದ್ದಾರೆ. ಕೊನೆಗೆ ಟೀಶರ್ಟ್ ಉಲ್ಟಾ ಹಾಕಬೇಕಾಯಿತು. ದಕ್ಷಿಣಾಫ್ರಿಕದ ನಗರ ಜೋಹಾನ್ಸ್ ಬರ್ಗ್‍ನ ಓ. ಆರ್ ಟಾಂಪೊ ವಿಮಾನ ನಿಲ್ದಾಣದಲ್ಲಿ ಘಟನೆ ನಡೆದಿದೆ.

ನ್ಯೂಝಿಲೆಂಡಿನ ವೆಲ್ಲಿಂಗ್ಟನ್‍ನಿಂದ ಅಜ್ಜನನ್ನು ಭೇಟಿಯಾಗಲು ಹೆತ್ತವರ ಜೊತೆ ದಕ್ಷಿಣಾಫ್ರಿಕ್ಕೆ ಸ್ಟೀವ್ ಬಂದಿದ್ದ. ಜಾರ್ಜ್‍ಟೌನ್‍ಗೆ ಹೋಗುವ ವಿಮಾನಕ್ಕೆ ಹತ್ತಬೇಕಿತ್ತು. ಆದರೆ ಸ್ವೀವ್‍ನ ಟಿ ಶರ್ಟ್ ವಿವಾದಕ್ಕೆ ಕಾರಣವಾಗಿತ್ತು. ಹಾವಿನ ಚಿತ್ರ ಇರುವುದರಿಂದ ಬೇರೆ ಪ್ರಯಾಣಿಕರು ಹೆದರಬಹುದು ಎಂದು ಸೆಕ್ಯುರಿಟಿ ಅಧಿಕಾರಿ ಹೇಳಿದರು. ಉಪಾಯವಿಲ್ಲದೆ ಟೀಶರ್ಟ್ ಅನ್ನು ಉಲ್ಟಾ ಮಾಡಿ ಸ್ವೀವ್ ಧರಿಸಿದ ನಂತರ ವಿಮಾನಕ್ಕೆ ಹತ್ತಲು ಬಿಡಲಾಗಿದೆ. ಇದೇವೇಳೆ ಸೆಕ್ಯುರಿಟಿ ಅಧಿಕಾರಿಗಳು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಭಯ ಮೂಡಿಸುವ ವಸ್ತುವನ್ನು ತಡೆಯುವ ಅಧಿಕಾರ ತಮಗಿದೆ ಎಂದು ಹೇಳಿದ್ದಾರೆ. ನಂತರ ಸ್ಟೀವ್ ವಿಮಾನ ಕಂಪೆನಿಗೆ ದೂರು ನೀಡಿದ್ದಾನೆ. ತನಿಖೆ ನಡೆಸಿ ಡ್ರೆಸ್ ಕೋಡ್ ಕುರಿತು ಸ್ಪಷ್ಟತೆಯನ್ನು ನೀಡುವುದಾಗಿ ವಿಮಾನ ಕಂಪೆನಿ ತಿಳಿಸಿತು.