ಸನ್ಮಾರ್ಗ ವಾರ್ತೆ-
ಚೆನ್ನೈ, ಜ. 3: ತಮಿಳ್ನಾಡಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಡಿಎಂಕೆ ಸಖ್ಯ ಮುಂದಿದೆ. 37 ಜಿಲ್ಲೆಗಳಲ್ಲಿ 27 ಜಿಲ್ಲೆಗಳ ಗ್ರಾಮ ಪಂಚಾಯತ್ ಅಧ್ಯಕ್ಷ, ಗ್ರಾಮ ಪಂಚಾಯತ್ ವಾರ್ಡ್ ಸದಸ್ಯರು, ಪಂಚಾಯತ್ ಯೂನಿಯನ್ ವಾರ್ಡ್ ಮೆಂಬರ್, ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಡಿಸೆಂಬರ್ 27, 30ರಂದು ಚುನಾವಣೆ ನಡೆದಿದ್ದು ಒಟ್ಟು 73,404 ಸ್ಥಾನಗಳಿಗೆ 2,31,890 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆದಿದ್ದರಿಂದ ಮತ ಎಣಿಕೆ ನಿಧಾನಗತಿಯಲ್ಲಿ ಸಾಗಿದೆ.
ಈವರೆಗೆ ಡಿಎಂಕೆ ಸಖ್ಯಕ್ಕೆ 491 ಸೀಟುಗಳು ಸಿಕ್ಕಿವೆ. ಎಐಡಿಎಂಕೆಗೆ 447 ಸೀಟು ಸಿಕ್ಕಿವೆ. ಡಿಎಂಕೆಗೆ 149 ಜಿಲ್ಲಾಪಂಚಾಯತ್ ಸೀಟುಗಳು ಮತ್ತು ಅಣ್ಣಾಡಿಎಂಕೆಗೆ 131 ಸೀಟುಗಳು ಸಿಕ್ಕಿವೆ. ಗ್ರಾಮಪಂಚಾಯತ್ಗಳಲ್ಲಿ ಡಿಎಂಕೆ ಅಣ್ಣಾಡಿಎಂಕೆಗಿಂತ ಮುಂದಿದೆ.












