1018 ಸ್ಥಳಗಳಿಗೆ ಹೊಸ ಹೆಸರು ನೀಡಿದ ತಮಿಳ್ನಾಡು ಸರಕಾರ; ಕೋಯಂಬತ್ತೂರ್, ದಿಂಡಿಗಲ್ ಇನ್ನಿಲ್ಲ

0
1463

ಸನ್ಮಾರ್ಗ ವಾರ್ತೆ

ಚೆನ್ನೈ,ಜೂ.11: ತಮಿಳ್ನಾಡಿನಲ್ಲಿ ಸಾವಿರಕ್ಕೂ ಹೆಚ್ಚು ನಗರಗಳು ಮತ್ತು ಗ್ರಾಮಗಳ ಹೆಸರನ್ನು ಬದಲಾಯಿಸಲಾಗಿದೆ. 1018 ಸ್ಥಳಗಳ ಹೆಸರು ಇಂಗ್ಲಿಷಿನಿಂದ ತಮಿಳು ಉಚ್ಚರಣೆಗೆ ಬದಲಾಯಿಸಲು ಸರಕಾರ ಆದೇಶಿಸಿದೆ. ತಜ್ಞ ಸಮಿತಿಯ ಶಿಫಾರಸು ಪ್ರಕಾರ ಸರಕಾರ ಈ ನಿರ್ಧಾರ ತಳೆದಿದೆ. ಕೋಯಮತ್ತೂರು, ವೆಲ್ಲೂರುಗಳಂತಹ ಮುಖ್ಯ ಸ್ಥಳಗಳ ಹೆಸರು ಬದಲಾಯಿಸಲಾಗಿದೆ. ಕೋಯಂಬತ್ತೂರು ಇನ್ನು ಕೋಯಂಪುತ್ತೂರ್ ಆಗಲಿದೆ. ಅಬಂಟ್ಟೂರನ್ನು ಅಂಬತ್ತೂರಾ, ವೆಲ್ಲೂರನ್ನು ವೇಲೂರ್ ಎಂದು ಬದಲಾಯಿಸಲಾಗಿದೆ. ದಿಂಡಿಗಲ್ ಇನ್ನು ತಿಂಡುಕ್ಕಲ್ ಆಗಲಿದೆ. ಪೆರಂಬೂರ್ ಪೆರಾಂಬೂರ್, ತೊಂಡಿಯಾರ್‍ಪೇಟ್- ತಂಡಿಯಾರ್ ಪೇಟೈ , ಎಗ್ಮೂರ್- ಏಯುಂಬೂರ್ ಆಗಲಿದೆ.

ಎರಡು ವರ್ಷ ಹಿಂದೆ ವಿಧಾನಸಭೆಯಲ್ಲಿ ಘೋಷಿಸಿದಂತೆ ಇಂಗ್ಲಿಷ್ ಉಚ್ಚಾರಣೆಯ ಹೆಸರನ್ನು ತಮಿಳು ಉಚ್ಚಾರಣೆಯ ತರಲಾಗಿದೆ. ಕಳೆದ ದಿವಸ ಹೆಸರು ಬದಲಾಯಿಸಿದ ಆದೇಶವನ್ನು ಸರಕಾರ ಹೊರಡಿಸಿತು. ಹೆಸರು ಬದಲಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ಜಿಲ್ಲಾಧಿಕಾರಿಗಳು ಮುಂದಿನ ಕ್ರಮವನ್ನು ಕೈಗೊಳ್ಳಲಿರುವರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.