ವಾಷಿಂಗ್ಟನ್,ಜೂ.4: ಸ್ವಂತ ದೇಶವೆಂಬ ಫೆಲಸ್ತೀನ್ ಬೇಡಿಕೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಳಿಯ ಮತ್ತು ಹಿರಿಯ ಸಲಹೆಗಾರ್ ಜರಾಲ್ಡ್ ಕುಶ್ನರ್ ನಿರಾಕರಿಸಿ ಫೆಲಸ್ತೀನಿಗೆ ಸ್ವಂತ ಆಡಳಿತ ನಡೆಸುವ ಶಕ್ತಿ ಇಲ್ಲ ಎಂದು ಹೀಯಾಳಿಸಿದ್ದಾರೆ. ಆದರೆ ಅವರು ಸ್ವಂತ ಆಡಳಿತಕ್ಕೆ ಅರ್ಹರಾಗಿದ್ದಾರೆ. ಆದರೆ ಆಡಳಿತ ನಡೆಸುವಂತಹ ಸಾಮರ್ಥ್ಯವನ್ನು ಅವರು ಹೊಂದಿಲ್ಲ ಎಂದರು. ಇಸ್ರೆಲ್ನ ಹಸ್ತಕ್ಷೇಪ ಇಲ್ಲದ ಒಂದು ರಾಷ್ಟ್ರವನ್ನು ಮುನ್ನಡೆಸಲು ಫೆಲಸ್ತೀನ್ ಸಮರ್ಥವಾಗಿದೆಯೆ ಎಂಬ ಪ್ರಶ್ನೆಗೆ ಅವರು ಹೀಗೆಂದರು. ಅವರು ಟಿವಿಯೊಂದಕ್ಕೆ ಸಂದರ್ಶನ ನೀಡುತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು. ಮಧ್ಯಪ್ರಾಚ್ಯ ಶಾಂತಿಗೆ ಅಮೆರಿಕ ಮುಂದಿಡುವ ಫಾರ್ಮೂಲದ ಜನಕ ಕುಷ್ನರ್ ಆಗಿದ್ದಾರೆ. ದ್ವಿರಾಷ್ಟ್ರ ಫಾರ್ಮುಲಾ ಮುಂದಿಟ್ಟಿದ್ದೀರಾ ಎಂಬ ಪ್ರಶ್ನೆಗೆ ಕುಷ್ನರ್ ಉತ್ತರಿಸಿಲ್ಲ. ಈಗಾಗಲೇ ಫೆಲಸ್ತೀನ್ ಕುಷ್ನರ್ ರಚಿಸಿದ ಒಪ್ಪಂದ ಪಾರ್ಮೂಲವನ್ನು ಸಾರಾಸಗಟಾಗಿ ಅಮೆರಿಕ ಪರವಾಗಿದೆ ಎಂದು ತಿರಸ್ಕರಿಸಿದೆ.












