ಅಯೋಧ್ಯೆ ಕೋಲಾಹಲಗಳು ರಾಜಕೀಯ ಪ್ರೇರಿತ: ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ

0
1460

ಲಕ್ನೊ: ಅಗತ್ಯ ಬಿದ್ದರೆ ರಾಮ ಮಂದಿರ ನಿರ್ಮಾಣಕ್ಕೆ ಹೋರಾಟವನ್ನು ಆರಂಭಿಸಲಾಗುವುದು ಎಂದು ಆರೆಸ್ಸೆಸ್ ನಿಲುವು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.

ಈ ವಿಷಯದಲ್ಲಿ ಈಗ ನಡೆಯುತ್ತಿರುವ ಪ್ರಕ್ರಿಯೆಗಳೆಲ್ಲವೂ ಸರಿಯಾದ ರಾಜಕೀಯ ಹಿತಾಸಕ್ತಿಯನ್ನು ಉದ್ದೇಶಿಸಿದ್ದಾಗಿದೆ ಎಂದು ಹಿಂದೂವಾದಿ ಶಕ್ತಿಗಳ ಚಟುವಟಿಕೆಗಳು ತೋರಿಸಿಕೊಡುತ್ತಿವೆ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ವಾಲಿ ರಹ್ಮಾನಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದೆಲ್ಲ ನಡೆಯುತ್ತಿದೆ. ಈ ಸಂಘಟನೆಗಳು ಈಗ ಏನು ಮಾಡುತ್ತಿವೆ ಎಂಬುದು ಸ್ಪಷ್ಟವಲ್ಲ ಎಂದು ಅವರು ಲಕ್ನೋದಲ್ಲಿ ಹೇಳಿದರು. ಅವರು ಹೇಳುವ ವಿಷಯದಲ್ಲಿ ಆರೆಸ್ಸೆಸ್ ಮುಂದುವರಿಯುತ್ತಿದೆ. ಇದು ದೇಶದಲ್ಲಿ ದೊಡ್ಡ ಎಡವಟ್ಟು ಸೃಷ್ಟಿಸಬಹುದಾಗಿದೆ ಎಂದು ಅವರು ಶಂಕೆ ವ್ಯಕ್ತಪಡಿಸಿದರು.

1992ರಲ್ಲಿ ಹಿಂದೂ-ಮುಸ್ಲಿಂ ಕೋಮುವಾದ ಇಂದಿನಂತೆ ವ್ಯಾಪಕವಾಗಿರಲಿಲ್ಲ. ಮುಂಬರುವ ಕಾಲದಲ್ಲಿ ಇದು ಹೆಚ್ಚಬಹುದು ಎಂದು ರಹ್ಮಾನಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೋರ್ಟಿನ ತೀರ್ಪು ಬರುವವರೆಗೆ ಕಾಯಬೇಕೆಂದು ಉತ್ತರ ಪ್ರದೇಶದ ಜಮ್‍ಇಯ್ಯತ್ತುಲ್ ಉಲೆಮಾ ಹಿಂದ್ ಅಧ್ಯಕ್ಷ ಮೌಲಾನಾ ಅರ್ಶದ್ ರಾಶಿದ್ ಆಗ್ರಹಿಸಿದರು.