ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ. 20: ದೇಶದಲ್ಲಿ ಕೊರೊನಾ ವೈರಸ್ ದಿನಾಲೂ ಹೆಚ್ಚುತ್ತಿದ್ದು 17 ಸಾವಿರಕ್ಕೂ ಹೆಚ್ಚು ಮಂದಿಗೆ ರೋಗ ತಗಲಿದೆ. ಇದರಲ್ಲಿ 2546 ಜನರು ರೋಗದಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 17265 ಆಗಿದೆ. ದೇಶದಲ್ಲಿ 543 ಜನರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 110 ಹೊಸ ಪ್ರಕರಣಗಳು ದಿಲ್ಲಿಯಲ್ಲಿ ಪತ್ತೆಯಾಗಿದೆ. ದಿಲ್ಲಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 3003ಕ್ಕೆ ಏರಿಕೆಯಾಗಿದ್ದು ಕಳೆದ ಎರಡು ದಿವಸಗಳಿಂದ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಸರಕಾರವನ್ನು ಆತಂಕಕ್ಕೆ ದೂಡಿದೆ.
ಇದೇವೇಳೆ ಮಣಿಪುರ ಮುಖ್ಯಮಂತ್ರಿ ರಾಜ್ಯ ಸಂಪೂರ್ಣ ಕೊರೊನಾ ಮುಕ್ತವಾಗಿದೆ ಎಂದು ಘೋಷಿಸಿದ್ದಾರೆ. ರವಿವಾರ ಟ್ವೀಟ್ ಮಾಡಿದ ಅವರು ಕೊರೊನಾ ಪೀಡಿತರಾಗಿದ್ದವರೆಲ್ಲರೂ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು. ಗೋವಾ ಕೂಡ ಕೊರೊನಾ ರೋಗ ಮುಕ್ತವಾಗಿದ್ದು ಏಳು ಮಂದಿ ಕೊರೊನಾ ಪೀಡಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳ ಕೊರೊನಾ ರೋಗಿಗಳು ಪತ್ತೆಯಾದ ಕೂಡಲೇ ಗಡಿಯನ್ನು ಮುಚ್ಚಿದ್ದವು. ಆಸ್ಪತ್ರೆಯಲ್ಲಿ ಒಪಿಡಿ ಬಂದ್ ಮಾಡಲಾಗಿತ್ತು.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












