2018ರಲ್ಲಿ ದೇಶದಲ್ಲಿ ಪ್ರತಿದಿನ 80 ಕೊಲೆ, 91 ಅತ್ಯಾಚಾರ

0
531

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ.10: 2018ರಲ್ಲಿ ದೇಶಾದ್ಯಂತ ಪ್ರತಿದಿನ 80 ಕೊಲೆ, 91 ಅತ್ಯಾಚಾರ ಘಟನೆಗಳು, 289 ಅಪಹರಣ ಘಟನೆಗಳು ನಡೆದಿವೆ ಎಂದು ರಾಷ್ಟ್ರೀಯ ಕ್ರೈಂ ರೆಕಾರ್ಡ್ಸ್ ಬ್ಯೂರೊ ವರದಿ ಬಹಿರಂಗಪಡಿಸಿದೆ. ಹಿಂದಿನ ವರ್ಷಗಳಿಗಿಂತ ಒಟ್ಟು ಅಪರಾಧ ಕೃತ್ಯಗಳಲ್ಲಿಯೂ ಹೆಚ್ಚಳವಾಗಿದೆ. 2017ರಲ್ಲಿ 50,07,044 ಅಪರಾಧ ಕೃತ್ಯಗಳು ನಡೆದಿದ್ದರೆ 2018ರಲ್ಲಿ ಎಪ್ಪತ್ತು ಸಾವಿರ ಹೆಚ್ಚಳವಾಗಿದೆ. ಅಂದರೆ 50,74,634ರಷ್ಟು ಅಪರಾಧಗಳು ನಡೆದಿವೆ.

ಕೊಲೆಗಳಲ್ಲಿ ಶೇ. 1.3( 28, 653) ಹೆಚ್ಚಳ, ಅಪಹರಣದಲ್ಲಿ ಶೇ.10.3ರಷ್ಟು ಹೆಚ್ಚಳ. 2017ರಲ್ಲಿ ಇಂತಹ 95,893 ದೂರುಗಳು ದಾಖಲಾಗಿದ್ದರೆ 2018ರಲ್ಲಿ 1,05,734 ದೂರು ದಾಖಲಾಯಿತು. ಇದರಲ್ಲಿ ಶೇ. 80,871 ಅಪಹರಿಸಲ್ಟಟ್ಟವರು ಮಹಿಳೆಯರು.

2018ರಲ್ಲಿ ಮಹಿಳೆಯರ ವಿರುದ್ಧ ಅಪರಾಧ ಕೃತ್ಯಗಳ ವಿಭಾಗದಲ್ಲಿ 3, 78, 277 ದೂರುಗಳು ದಾಖಲಾಗಿದ್ದು 2017ಕ್ಕಿಂತ 20,000ದಷ್ಟು ಹೆಚ್ಚಳವಾಗಿದೆ. 2018ರಲ್ಲಿ ಒಟ್ಟು ಅತ್ಯಾಚಾರ ಪ್ರಕರಣಗಳು 33,356 ಆಗಿತ್ತು.