ಸನ್ಮಾರ್ಗ ವಾರ್ತೆ-
ಹೊಸದಿಲ್ಲಿ, ಜ.10: ಕಾಶ್ಮೀರದ ನಿಯಂತ್ರಣಗಳನ್ನು ಮರುಪರಿಶೀಲನೆಗೊಡ್ಡಬೇಕಾಗಿದೆ ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟು ಆದೇಶಿಸಿದೆ. ಇಂಟರ್ನೆಟ್ ಸೇವೆ, ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಕೋರ್ಟು ತಿಳಿಸಿತು. ಇಂಟರ್ನೆಟ್ ಹಕ್ಕು ಜನರ ಅಭಿವ್ಯಕ್ತಿಯ ಸ್ವಾತಂತ್ರ್ಯದಲ್ಲಿ ಸೇರಿದೆ. ಸಂವಿಧಾನದ 19ನೇ ವಿಧಿಯ ಭಾಗವೂ ಆಗಿದೆ ಎಂದು ಜಸ್ಟಿಸ್ ಎನ್ವಿ ರಮಣ ಅಧ್ಯಕ್ಷತೆಯ ಮೂವರು ನ್ಯಾಯಾಧೀಶರ ಪೀಠ ಹೇಳಿತು.
ಪರಿಸ್ಥಿತಿ ಅನುಸಾರ ಇಂಟರ್ನೆಟ್ ನಿಷೇಧ ಹೇರಬೇಕಿದೆ. ಪ್ರಜೆಗಳ ಹಕ್ಕು ದೃಢಪಡಿಸುವುದು ಕೋರ್ಟಿನ ಗುರಿಯಾಗಿದೆ. ಜನರ ಸುರಕ್ಷೆ, ಸ್ವಾತಂತ್ರ್ಯ ಪರಿಗಣಿಸಿ ತೀರ್ಪು ನೀಡಲಾಗಿದೆ ಎಂದು ಕೋರ್ಟು ಹೇಳಿತು. ಕಾಶ್ಮೀರದ ನಿಯಂತ್ರಣವನ್ನು ಪ್ರಶ್ನಿಸಿದ್ದ ಅರ್ಜಿಯಲ್ಲಿ ಕೋರ್ಟು ಈ ತೀರ್ಪು ನೀಡಿದೆ. ಕಾ೦ಗ್ರೆಸ್ ನಾಯಕ ಗುಲಾಂ ನಬಿ ಆಝಾದ್ ಸಹಿತ ಹಲವಾರು ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.












