ಶಫೀಕ್ ಖಾಸ್ಮಿಯಿಂದ ಕಿರುಕುಳಕ್ಕೊಳಗಾದ ಬಾಲಕಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದ ಹೈಕೋರ್ಟು

0
1728

ಕೊಚ್ಚಿ: ಶಫೀಕ್ ಖಾಸ್ಮಿ ಕಿರುಕುಳ ನೀಡಿದ ಬಾಲಕಿಯನ್ನು ಕೋರ್ಟಿನಲ್ಲಿ ಹಾಜರುಪಡಿಸುವಂತೆ  ಆದೇಶಿಸಿದೆ. ಮಾರ್ಚ್ 6 ರಂದು ಕೋರ್ಟಿಗೆ ಬಾಲಕಿಯನ್ನು ಹಾಜರುಪಡಿಸಬೇಕಾಗಿದೆ. ಶಿಶುಕಲ್ಯಾಣ ಸಮಿತಿಯ ವಶದಲ್ಲಿರುವ ಬಾಲಕಿಯನ್ನು ತಮ್ಮ ವಶಕ್ಕೊಪ್ಪಿಸಬೇಕೆಂದು ಆಗ್ರಹಿಸಿ ತಾಯಿ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಹೈಕೋರ್ಟು ಮಧ್ಯಂತರ ಆದೇಶ ನೀಡಿದೆ. ಚೈಲ್ಡ್‌ ಲೈನ್‍ನ ಹೋಮ್‍ಗೆ ಹೋಗಿ ಅಲ್ಲಿರುವ ಬಾಲಕಿಯನ್ನು ಭೇಟಿಯಾಗಲು ತಾಯಿ ಮತ್ತು ಸಹೋದರರಿಗೆ ಈ ಹಿಂದೆ ಹೈಕೋರ್ಟು ಅನುಮತಿ ನೀಡಿತ್ತು.

ಬಾಲಕಿಯ ಇಷ್ಟವನ್ನು ಪರಿಗಣಿಸದೆ, ಸಹಜ ರಕ್ಷಕಿಯಾದ ತನ್ನ ವಾದಕ್ಕೆ ಕಿವಿಕೊಡದೆ ತಿರುವನಂತಪುರಂ ಚೈಲ್ಡ್ ಹೋಮ್‍ನಲ್ಲಿ ಬಾಲಕಿಯನ್ನು ಇರಿಸಲಾಗಿದೆ. ತಾಯಿಯ ನೈತಿಕ ಬೆಂಬಲ ಮತ್ತು ಸಾನಿಧ್ಯ ಅಗತ್ಯವಿರುವ ಪರೀಕ್ಷೆಯ ಸಮಯದಲ್ಲಿ ಸಮಿತಿಯ ಆದೇಶ ಬಾಲಕಿಯ ಹಕ್ಕು, ಹಿತಕ್ಕೆ ಹಾನಿಕವಾಗಿದೆ ಮತ್ತು ಬಾಲಕಿ ಹೆಚ್ಚಿನ ಮಾನಸಿಕ ಒತ್ತಡಕ್ಕೊಳಗಾಗಿದ್ದಾಳೆ ಎಂದು ಅರ್ಜಿಯಲ್ಲಿ ತಾಯಿ ಬೆಟ್ಟುಮಾಡಿದ್ದಾರೆ.

ಪರೀಕ್ಷೆ ಬರೆಯಬೇಕಾಗಿದೆ. ಅದಕ್ಕೆ ಸಿದ್ಧತೆಯನ್ನೂ ನಡೆಸಬೇಕಾಗಿದೆ. ಆದ್ದರಿಂದ ಬಾಲಕಿಯ ಇಷ್ಟಕ್ಕೆ ವಿರುದ್ಧವಾಗಿ ಕೂಡಿ ಹಾಕಲು ಶಿಶು ಕಲ್ಯಾಣ ಸಮಿತಿಗೆ ಅಧಿಕಾರವಿಲ್ಲ. ಬಾಲಕಿಯನ್ನು ತನ್ನ ಜೊತೆ ಕಳುಹಿಸಬೇಕೆಂದು ಬಾಲಕಿಯ ತಾಯಿ ಹೇಳಿದ್ದಾರೆ. ಬಾಲಕಿಯೊಂದಿಗೆ ಮಾತಾಡಲು ಫೋನ್ ಕೂಡಕೊಡುತ್ತಿಲ್ಲ ಎಂದು ಶಿಶು ಸಂರಕ್ಷಣಾ ಸಮಿತಿಗೆ ನೀಡಿದ ಮನವಿ ಕೂಡಾ ತಿರಸ್ಕೃತವಾಗಿದೆ. ಬಾಲಕಿಯನ್ನು ತನ್ನ ವಶಕ್ಕೊಪ್ಪಿಸಬೇಕೆಂದು ಜಿಲ್ಲಾಧಿಕಾರಿಗೆ ನೀಡಿದ ಮನವಿಯಲ್ಲಿಯೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.