ನಾಳೆಯೊಳಗೆ 22 ಶಾಸಕರ ರಾಜೀನಾಮೆ; ಅತೃಪ್ತ ಶಾಸಕರಿಂದ ಮಾಹಿತಿ, ಸರಕಾರ ಪತನ ಸನ್ನಿಹಿತ?

0
908

ಬೆಂಗಳೂರು: ಜು.6, ಸಮ್ಮಿಶ್ರ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ 12 ಮಂದಿ ಅತೃಪ್ತ ಶಾಸಕರು ರಾಜೀನಾಮೆಯನ್ನು ನೀಡಿದ್ದಾರೆ ಮತ್ತು ಇದೀಗ 8 ಮಂದಿ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ ಎಂದು ವರದಿಗಳಿವೆ. ಅಲ್ಲದೆ, ಇವರಲ್ಲಿ 8 ಮಂದಿ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ ಮತ್ತು ತಮ್ಮ ರಾಜೀನಾಮೆಗೆ ಕಾರಣಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಯ ನಡುವೆಯೇ ಇನ್ನೂ ಹತ್ತು ಮಂದಿ ಶಾಸಕರು ರಾಜೀನಾಮೆ ನೀಡಲಿರುವರೆಂದು ತಿಳಿದು ಬಂದಿದ್ದು ಇದು ನಡೆದರೆ ರಾಜೀನಾಮೆ ನೀಡುವವರ ಸಂಖ್ಯೆ ಒಟ್ಟು ಒಟ್ಟು 22 ಆಗಲಿದೆ. ಈ ವಿಷಯವನ್ನೂ ಅತೃಪ್ತ ಶಾಸಕರು ರಾಜ್ಯಪಾಲರಿಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಚಿಕ್ಕೋಡಿಯ ಗನೇಶ್ ಹುಕ್ಕೇರಿ, ಎಚ್ ಡಿ ಕೋಟೆಯ ಅನಿಲ್ ಚಿಕ್ಕಮಾದು, ಖಾನಪುರದ ಅಂಜಲಿ ನಿಂಬಾಳ್ಕರ್, ಶ್ರೀಮಂತ್ ಪಾಟೀಲ್ ಹಾಗೂ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಯವರು ನಾಳೆ ಶಾಸಕ ಅಠಾಣಕ್ಕೆ ರಾಜೀನಾಮೆ ನೀಡಲಿರುವರೆಂದು ತಿಳಿದು ಬಂದಿದೆ. ಜೊತೆಗೆ ಕೋಲಾರದ ಐವರು ಶಾಸಕರು ಕೂಡ ನಾಳೆ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದ್ದು, ಇದು ಸಾಧ್ಯವಾದರೆ ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಲಿದೆ.