ನಾಳೆ ಮೊದಲ ಹಂತದ ಮತದಾನ

0
528

ಹೊಸದಿಲ್ಲಿ,ಎ.10: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣಾ ಪ್ರಚಾರ ಮಂಗಳವಾರ ಕೊನೆಗೊಂಡಿದ್ದು 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ 91 ಲೋಕಸಭಾ ಕ್ಷೇತ್ರಗಳಿಗೆ ಗುರುವಾರ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ.

ಮೊದಲ ಹಂತದಲ್ಲಿ ಆಂಧ್ರಪ್ರದೇಶ(25 ಸೀಟುಗಳು), ತೆಲಂಗಾಣದ(17 ಸೀಟುಗಳು), ಅಸ್ಸಾಂ(ಐದು ಸೀಟುಗಳು),  ಬಂಗಾಳ(ಎರಡು ಸೀಟುಗಳು) ಬಿಹಾರ(4), ತ್ರಿಪುರ(ಒಂದು) ಅರುಣಾಚಲ ಪ್ರದೇಶ(ಎರಡು), ಮಹಾರಾಷ್ಟ್ರ(ಏಳು),  ಮಣಿಪ್ಪುರ(ಒಂದು) ಮೇಘಾಲಯ(ಎರಡು) ಮಿಝೊರಾಂ(ಒಂದು),  ನಾಗಲೆಂಡ್(ಒಂದು),  ಒಡಿಸ್ಸಾ(ನಾಲ್ಕು), ಸಿಕ್ಕಿಂ(ಒಂದು),  ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್, ಲಕ್ಷದ್ವೀಪಗಳ ಲೋಕಸಭೆಗೆ ನಾಳೆ ಮತದಾನ ನಡೆಯಲಿದೆ.