ಹೊಸದಿಲ್ಲಿ,ಎ.1: ತಲೆತಪ್ಪಿಸಿಕೊಂಡ ಆರೋಪಿಯಾಗಿ ಘೋಷಿಸಲಾಗಿದ್ದ ಜೈಷೆ ಮುಹಮ್ಮದ್ ಭಯೋತ್ಪಾದಕ ಫಯಾಝ್ ಅಹ್ಮದ್ ಲೋನ್ ಎಂಬಾತನ್ನು ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ದಿಲ್ಲಿ ವಿಶೇಷ ದಳ ಪೊಲೀಸರು ಬಂಧಿಸಿದೆ.
ದಿಲ್ಲಿ ಪೊಲೀಸರು ಈತನ ಸುಳಿವು ನೀಡುವವರಿಗೆ ಎರಡು ಲಕ್ಷ ಬಹುಮಾನ ಘೋಷಿಸಿದ್ದರು. ಜಾಮೀನು ರಹಿತ ವಾರಂಟನ್ನು ಈತನ ವಿರುದ್ಧ ಹೊರಡಿಸಲಾಗಿತ್ತು.
2015ರಲ್ಲಿ ಫಯಾಝ್ ಅಹ್ಮದ್ನನ್ನು ಬಂಧಿಸಲು ಪೊಲೀಸರು ಯತ್ನಿಸಿದ್ದರು. ಆ ಸಂದರ್ಭದಲ್ಲಿ ಚಾಕಚಕ್ಯತೆಯಿಂದ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಫಯಾಝ್ ಯಶಸ್ವಿಯಾಗಿದ್ದ.












