ಡೇಟಿಂಗ್ ಸೈಟ್ ಗೋಲ್‍ಮಾಲ್; 65 ವರ್ಷದ ವೃದ್ಧನಿಗೆ 46 ಲಕ್ಷ ರೂ. ವಂಚಿಸಿದ ಮಹಿಳೆಯರು

0
667

ಮುಂಬೈ,ಎ.1: ಡೇಟಿಂಗ್ ಸೈಟಿನಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದ ಮಲಾಡ್ ಎಂಬಲ್ಲಿನ 65 ವರ್ಷದ ವೃದ್ಧರೊಬ್ಬರಿಗೆ ಇಬ್ಬರು ಮಹಿಳೆಯರು ಸೇರಿ 46 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ. ನಿಮ್ಮ ಬಳಿಗೆ ಯುವತಿಯರನ್ನು ಕಳುಹಿಸಿಕೊಡುತ್ತೇವೆ ಎಂದು ಇಬ್ಬರು ಮಹಿಳೆಯರು ಹಲವು ಬಾರಿಯಾಗಿ ವೃದ್ಧನಿಂದ 46 ಲಕ್ಷ ರೂಪಾಯಿಯನ್ನು ಬ್ಯಾಂಕ್ ಖಾತೆಯ ಮೂಲಕ ಪಡೆದುಕೊಂಡಿದ್ದಾರೆ.

ಈ ವರ್ಷ ಜನವರಿಯಲ್ಲಿ ಮಹಿಳೆಯರಿಂದ ವಂಚನೆಗೊಳಗಾಗಿದ್ದ ವಯೋವೃದ್ಧ ಈಗ ಪೊಲೀಸರಿಗೆ ದೂರು ನೀಡಿದ್ದಾರೆ. WWW.Loconto.cam ಎಂಬ ಉಚಿತ ಕ್ಲಾಸಿಫೈಡ್ಸ್ ವೆಬ್‍ಸೈಟಿನಲ್ಲಿ ಲುಕಿಂಗ್ ಫಾರ್ ಎಂಬ ಸೆಕ್ಷನ್‍ನಲ್ಲಿ ಕ್ಲಿಕ್ ಮಾಡಿದ ಬಳಿಕ ಒಂದು ಡೇಟಿಂಗ್ ಸೈಟಿಗೆ ಭೇಟಿ ನೀಡಲು ತಿಳಿಸಲಾಗಿತ್ತು. ನಂತರ ಅವರು ಡೇಟಿಂಗ್ ಸೈಟ್‍ನಲ್ಲಿ ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಇದಾದÀ ನಂತರ ಮೀರಾ ಎನ್ನುವ ಹೆಸರಿನ ಮಹಿಳೆಯೊಬ್ಬರು ಫೋನ್ ಕರೆ ಮಾಡಿÀ ಮೂವರು ಯುವತಿಯರ ಫೋಟೊ ಕಳುಹಿಸಿ ಒಬ್ಬಳನ್ನು ಆಯ್ಕೆ ಮಾಡುವಂತೆ ವೃದ್ಧನಿಗೆ ಸೂಚಿಸಿದ್ದಾಳೆ. ಅಲ್ಲದೆ,25,500ರೂಪಾಯಿ ಕೊಟ್ಟರೆ ಯುವತಿಯನ್ನು ನೇರವಾಗಿ ಭೇಟಿ ಮಾಡಬಹುದು. ಒಂದು ವರ್ಷದವರೆಗೆ ಸಂಬಂಧ ಬೆಳೆಸಬಹುದು ಎಂದು ತಿಳಿಸಿದ್ದಳು. ನಂತರ ಬೇರೆ,ಬೇರೆ ನೆಪಗಳನ್ನು ಮುಂದಿಟ್ಟು ಬ್ಯಾಂಕ್ ಮೂಲಕ 46 ಲಕ್ಷ ರೂಪಾಯಿವರೆಗೆ ವೃದ್ಧನಿಂದ ಮಹಿಳೆಯರು ವಸೂಲು ಮಾಡಿದ್ದಾರೆ ಎಂದು ದೂರಿನಲ್ಲಿ 65 ವರ್ಷದ ವಯೋವೃದ್ಧ ಪೊಲೀಸರಿಗೆ ತಿಳಿಸಿದ್ದಾರೆ.

ಮೀರಾ ಮತ್ತು ರೋಸಿ ಎಂಬಿಬ್ಬರು ವೃದ್ಧನಿಗೆ ಮೋಸ ಮಾಡಿದ್ದು, ಇಂತಹ ಸೈಟ್‍ಗಳಲ್ಲಿ ಮೋಸಹೋಗುವ ಘಟನೆಗಳು ಸಾಮಾನ್ಯವಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದೇವೆ ಮತ್ತು ಶೀಘ್ರದಲ್ಲಿ ಮೋಸದ ಜಾಲ ಬೀಸಿದವರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.