24 ಗಂಟೆಗಳಲ್ಲಿ ಗಾಝದಲ್ಲಿ ಇಸ್ರೇಲಿನ ದಾಳಿಗೆ 324 ಮಂದಿ ಕೊಲಲ್ಪಟ್ಟಿದ್ದಾರೆ – ಫೆಲಸ್ತೀನ್ ಆರೋಗ್ಯ ಸಚಿವಾಲಯ

0
259

ಸನ್ಮಾರ್ಗ ವಾರ್ತೆ

ಗಾಝ, ಅ. 14: ಗಾಝದಲ್ಲಿ 24 ಗಂಟೆ ನಂತರ ಇಸ್ರೇಲ್ ದಾಳಿಯಲ್ಲಿ 324 ಮಂದಿ ಜೀವ ಕಳಕೊಂಡಿದ್ದಾರೆ ಎಂದು ಫೆಲಸ್ತೀನಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಮೃತಪಟ್ಟಿರುವವರಲ್ಲಿ ಶೇ. 66ರಷ್ಟು ಮಕ್ಕಳು ಮತ್ತು ಮಹಿಳೆಯರು.

ಇಸ್ರೇಲಿನ ದಾಳಿಯಲ್ಲಿ ಇದುವರೆಗೆ 1900 ಫೆಲಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ. 7696 ಮಂದಿ ಗಾಯಗೊಂಡಿದ್ದಾರೆ. ಹಮಾಸ್ ದಾಳಿಯಲ್ಲಿ ಇಸ್ರೇಲಿನಲ್ಲಿ ಕೊಲ್ಲಲ್ಪಟ್ಟದ್ದು 1300 ಮಂದಿ. ಗಾಝದಲ್ಲಿ ಇದುವರೆಗೆ 1300 ಕಟ್ಟಡಗಳನ್ನು ಇಸ್ರೇಲ್ ಪುಡಿಗುಟ್ಟಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.

ಉತ್ತರ ಗಾಝದಿಂದ  ಹೊರಟು ಹೋಗುತ್ತಿದ್ದ ಸಂದರ್ಭದಲ್ಲಿ ಇಸ್ರೇಲಿನ ವಾಯು ದಾಳಿಯಲ್ಲಿ 70 ಮಂದಿ ಕೊಲ್ಲಲ್ಪಟ್ಟರೆಂದು ಹಮಾಸ್ ತಿಳಿಸಿದೆ. ಮಕ್ಕಳು ಮಹಿಳೆಯರು ಕೊಲ್ಲಲ್ಪಟ್ಟಿರುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹಮಾಸ್ ತಿಳಿಸಿದೆ. ಕಾರಿನಲ್ಲಿ ಹೊರಟು ಹೋಗುತ್ತಿದವರ ಮೇಲೆ ಇಸ್ರೇಲ್ ಬಾಂಬು ಸುರಿಸಿದೆ.

ಇದೇ ವೇಳೆ ಜನರು  ಬೇರೆಡೆಗೆ ಹೋಗಬೇಕೆಂಬ ಆದೇಶವನ್ನು ಮರುಪರಿಶೀಲಿಸಬೇಕೆಂಬ ಬೇಡಿಕೆಯನ್ನು ಇಸ್ರೇಲ್ ತಿರಸ್ಕರಿಸಿದೆ. ಗಾಝಾದತ್ತ ಗುರಿಯಿಟ್ಟು ಸಮುದ್ರಿಂದ ದಾಳಿಯನ್ನು ಇಸ್ರೇಲ್ ತೀಕ್ಷ್ಣಗೊಳಿಸಿದೆ.
ಗಾಝಾದ ಹನ್ನೊಂದು ಲಕ್ಷ ಜನರು 24 ಗಂಟೆಗಳಲ್ಲಿ ಅಲ್ಲಿಂದ ಬೇರೆಡೆಗೆ ತೆರಳುವಂತೆ ಇಸ್ರೇಲ್ ಅಂತಿಮ ಎಚ್ಚರಿಕೆ ನೀಡಿದೆ. ಜನರು ವಾಹನದಲ್ಲಿ ನಡೆದು ದಕ್ಷಿಣ ಭಾಗಕ್ಕೆ ಜನರು ಹೋಗುತ್ತಿದ್ದಾರೆ. ವಿಶ್ವಸಂಸ್ಥೆಯ ವಾಹನಗಳಲ್ಲಿ ಹೋಗುವಾಗ ದಾರಿಯಲ್ಲಿ ಬಾಂಬಿಂಗ್ ನಡೆಯುತ್ತಿದೆ ಎಂದು ವರದಿಯಾಗಿದೆ.