ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಗುಂಡು ಹಾರಾಟ: ಬಾಲಕಿ ಸಹಿತ ನಾಲ್ವರಿಗೆ ಗಾಯ

0
442

ಸನ್ಮಾರ್ಗ ವಾರ್ತೆ

ಶ್ರೀನಗರ,ಸೆ.7: ಜಮ್ಮು-ಕಾಶ್ಮೀರದ ಸೋಪೊರ್‌ನಲ್ಲಿ ಸ್ಥಳೀಯರ ಮೇಲೆ ಭಯೋತ್ಪಾದಕರು ಗುಂಡುಹಾರಿಸಿದ್ದು, ದಾನ್‍ಗರ್‍‌ಪುರದಲ್ಲಿ ಎರಡು ವರ್ಷದ ಉಝ್ಮಾ ಜಾನ್ ಎಂಬ ಬಾಲಕಿ ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ. ದಾನ್‍ಗರ್‍ಪುರದ ಹಣ್ಣು ವ್ಯಾಪಾರಿಯ ಕುಟುಂಬದ ಮೇಲೆ ಗುಂಡು ಹಾರಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದು ಗಾಯಾಳುಗಳ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಭಯೋತ್ಪಾದಕರ ಮುನ್ನೆಚ್ಚರಿಕೆಯಿಂದಾಗಿ ಪ್ರದೇಶದಲ್ಲಿ ಅಂಗಡಿಗಳನ್ನು ಮುಚ್ಚಲು ಪೊಲೀಸರು ಸೂಚಿಸಿದ್ದಾರೆ.