ಸನ್ಮಾರ್ಗ ವಾರ್ತೆ-
ಮಂಗಳೂರು; ಸೆ. 7- ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಸಹ ಕಾರ್ಯದರ್ಶಿ ರಹ್ಮತುನ್ನಿಸಾ ಅವರು ಸೆ. 8ರಂದು ಮಂಗಳೂರಿಗೆ ಆಗಮಿಸಲಿದ್ದು, ಅದೇ ದಿನ ಸಂಜೆ 5 ಗಂಟೆಗೆ ನಗರದ ಪುರಭವನದಲ್ಲಿ ಜಿಐಓ ಏರ್ಪಡಿಸಿರುವ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಲಿದ್ದಾರೆ. “ಬದಲಾವಣೆಗಾಗಿ ವಿಚಾರಗಳ ಮರುಚಿಂತನೆ” ಎಂಬ ವಿಷಯದ ಮೇಲೆ ಜಿಐಓವು ಬೆಳಗ್ಗೆ 10 ಗಂಟೆಯಿಂದ ಪುರಭವನದಲ್ಲಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಉಪಸ್ಥಿತರುವರಲ್ಲದೆ, ಜಿಐಓ ಕಾರ್ಯಕರ್ತೆಯರನ್ನುದ್ದೇಶಿಸಿ ಬೆಳಗ್ಗಿನ ಅಧಿವೇಶನದಲ್ಲಿ ಮಾತಾಡಲಿದ್ದಾರೆ. ಹಾಗೆಯೇ,
ಮರುದಿನ ಸೆ. 9ರಂದು ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಸ್ಕೂಲ್ ಗೆ ಭೇಟಿ ನೀಡಲಿದ್ದು, ಬಬ್ಬುಕಟ್ಟೆಯ ಹಿರಾ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಲಿದ್ದಾರೆ. ಜೊತೆಗೆ, ಮುಸ್ಲಿಂ ಗಣ್ಯ ಮಹಿಳೆಯರು ಮತ್ತು ವಿವಿಧ ಮಹಿಳಾ ಸಂಘ ಸಂಸ್ಥೆಗಳ ಹೊಣೆಗಾರರನ್ನು ಉದ್ದೇಶಿಸಿ ನಗರದ ಹಿದಾಯತ್ ಸೆಂಟರ್ ನಲ್ಲಿ ಮಾತಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.












