ಜಾಮೀನು ನೀಡಿದರೆ ಲಾಲು ಪ್ರಸಾದ್ ಯಾದವ್ ರಾಜಕೀಯ ಮಾಡುತ್ತಾರೆ-ಸಿಬಿಐ

0
720

ಹೊಸದಿಲ್ಲಿ,ಎ.9: ಮೇವು ಹಗರಣ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‍ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ಸಿಬಿಐ ವಿರೋಧಿಸಿದೆ. ಒಂವೇಳೆ ಲೋಕಸಭಾ ಸಂದರ್ಭದಲ್ಲಿ ಲಾಲುಗೆ ಜಾಮೀನು ನೀಡಿದರೆ ರಾಜಕೀಯ ಚಟುವಟಿಕೆ ನಡೆಸಬಹುದು ಎಂದು ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಿದೆ. ಚಿಕಿತ್ಸೆಗಾಗಿ ಎಂಟು ತಿಂಗಳು ಆಸ್ಪತ್ರೆಯಲ್ಲಿದ್ದಾಗ ಅವರು ರಾಜಕೀಯ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದರು ಎಂದು ಸಿಬಿಐ ಆರೋಪಿಸಿತು. ಅನಾರೋಗ್ಯದಿಂದ ಜೈಲಿನಲ್ಲಿ ಉಳಿಯಲು ಸಾಧ್ಯವಾಗದ ಲಾಲು ಪ್ರಸಾದ್ ಯಾದವ್ ಹಠಾತ್ ಆರೋಗ್ಯಗಳಿಸಿಕೊಂಡು ಈಗ ಜಾಮೀನಿಗೆ ಶ್ರಮಿಸುತ್ತಿದ್ದಾರೆ ಎಂದು ಸಿಬಿಐ ಬೆಟ್ಟು ಮಾಡಿತು. ಚಿಫ್ ಜಸ್ಟಿಸ್ ರಂಜನ್ ಗೊಗೊಯಿ ನೇತೃತ್ವದ ಪೀಠ ಲಾಲುರ ಜಾಮೀನು ಅರ್ಜಿಯಲ್ಲಿ ವಿಚಾರಣೆ ನಡೆಸುತ್ತಿದೆ.