ಕ್ರೈಸ್ಟ್‌ಚರ್ಚ್ ದಾಳಿಯಲ್ಲಿ ಹಲವರು ಮೃತದೇಹಗಳ ಅಡಿಯಲ್ಲಿ ಮಲಗಿ ಪಾರಾದರು ಎನ್ನುತ್ತಾ ಕಣ್ಣೀರಿಟ್ಟ ಇಮಾಮರು

0
1258

ಕ್ರೈಸ್ಟ್‌ಚರ್ಚ್, ಮಾ. 18: ಐವರು ಭಾರತೀಯರ ಸಹಿತ ಐವತ್ತು ಮಂದಿ ಕೊನೆಯುಸಿರೆಳೆದ ಕ್ರೈಸ್ಟ್‌ಚರ್ಚ್ ಭಯೋತ್ಪಾದನಾ ದಾಳಿಯ ಕುರಿತು ಅಲ್ ನೂರ್ ಮಸೀದಿ ಮತ್ತು ಲಿನ್‍ವುಡ್ ಮಸೀದಿಯ ಇಮಾಮ್ ಆಗಿರುವ ಗಮಾಲ್ ಫೌದ ಮತ್ತು ಲತೀಫ್ ಅಲಾಬಿ ಅಂತಾರಾಷ್ಟ್ರೀಯ ಮಾಧ್ಯಮವಾದ ಎನ್‍ಎಸ್ ಹೆರಾಲ್ಡ್‌ನೊಂದಿಗೆ ತಮ್ಮ ಅನುಭವನ್ನು ಬಿಚ್ಚಿದರು. ಘಟನೆ ನಡೆದು ಒಂದೆರಡು ದಿವಸ ಕಳೆದರು ಇವರಲ್ಲಿ ನಡಕು ಇನ್ನೂ ಆರಿ ಹೋಗಿಲ್ಲ.

ಅಬ್ದುಲ್ ಅಝೀಝ್

 

ತಮ್ಮ ಮುಂದೆ ನಮಾಝಿಗಳು ಉರುಳಿ ಬಿದ್ದು ಸತ್ತ ದೃಶ್ಯವನ್ನು ಕಂಡ ಇವರು ಬಿಕ್ಕಳಿಸಿ ಅತ್ತರು. ಜುಮಾ ಭಾಷಣ(ಕುತ್‍ಬಾ)ಕ್ಕೆ ಐದು ನಿಮಿಷ ಬಾಕಿಯಿದ್ದಾಗ ಮೂರು ಗುಂಡು ಹಾರಾಟದ ಸದ್ದು ಮತ್ತು ಜನರ ಆಕ್ರಂದನ ಕೇಳಿತು. ಯಾವುದೋ ತುಂಟ ಹುಡುಗ ಆಡುತ್ತಿರುವುದಾಗಿರಹುದು ಅಥವಾ ಯಾವುದೋ ಮ್ಯೂಝಿಕ್ ಸಿಸ್ಟಂನಿಂದ ಬರುವ ಸದ್ದು ಇದಾಗಿರಬಹುದು ಎಂದು ಭಾವಿಸಿದ್ದೆ ಎಂದು ಹೇಳಿ ಇಮಾಮ್ ಫೌದಾ ಕಣ್ಣೀರಿಳಿಸಿದರು.

ಆದರೆ ತದನಂತರ ಇನ್ನೊಂದು ಗುಂಡಿನ ಸದ್ದು ಕೇಳಿಸಿತು ಅದು ಹೆಚ್ಚು ಸ್ಪಷ್ಟವಾಗಿತ್ತು. ಇದರ ಜೊತೆ ಅಲ್ಜೀರಿಯದ ಒಬ್ಬ ವ್ಯಕ್ತಿಯ ಆಕ್ರಂದನ ಕೇಳಿತು. ಜನರು ಜೀವ ಉಳಿಸುವ ಸಲುವಾಗಿ ಅವರು ಮಸೀದಿಯ ಕಿಟಕಿಯನ್ನು ಒಡೆದು ಹಾಕಿದರು. ಭಯೋತ್ಪಾದಕ ಬೆಂಡನ್‍ನ ದಾಳಿಯಿಂದ ಪಾರಾಗಲು ತಾನು ಶವದಂತೆ ಮಲಗಿದೆ ಎಂದು ಗಮಾಲ್ ಫೌದಾ ಹೇಳಿದರು. ಹೆಲ್ಮೆಟ್ ಸನ್ ಗ್ಲಾಸ್ ಹಾಕಿಕೊಂಡಿದ್ದ ಆತ ಸೈನಿಕನ ರೀತಿಯಲ್ಲಿ ಬಂದಿದ್ದ ಆತನ ಕೈಯಲ್ಲಿ ಸೆಮಿ ಆಟೊಮ್ಯಾಟಿಕ್ ಗನ್ ಇತ್ತು.

ಅಲ್ಜೀರಿಯದ ವ್ಯಕ್ತಿ ಗಾಜು ಒಡೆದಿದ್ದ ಬಲ ಬದಿಯ ಕಿಟಿಕಿಯಿಂದ ಹಲವಾರು ಜನ ಓಡಿ ಪಾರಾದರು. ಆದರೆ ಎಡ ಗಡೆಯ ಕಿಟಕಿ ಕಡೆಯಲ್ಲಿದ್ದ ಹೆಚ್ಚಿನವರಿಗೆ ಆತನ ಗುಂಡೇಟು ಬಿತ್ತು. ಸತ್ತವರ ಅಡಿಯಲ್ಲಿ ಶವದಂತೆ ಮಲಗಿ ಹಲವರು ಗುಂಡಿನ ದಾಳಿಯಿಂದ ಪಾರಾದರು ಎಂದು ಇಮಾಮ್ ತಿಳಿಸಿದರು.

ಮಸೀದಿಯ ಎಲ್ಲ ಮೂಲೆಗೂ ಹೋದ. ಕಣ್ಣೆದರು ಸಿಕ್ಕವರನ್ನೆಲ್ಲ ಗುಂಡು ಹಾರಿಸಿ ಕೊಂದು ಹಾಕಿದ. ಗುಂಡಿನ ಹೊಗೆಯಿಂದಾಗಿ ನಮ್ಮಲ್ಲಿ ಕೆಲವರಿಗೆ ಉಸಿರಾಡುವುದು ಕಷ್ಟವಾಯಿತು. ಆತ ಸಿಕ್ಕಸಿಕ್ಕ ಕಡೆಗಳಿಗೆಲ್ಲ ಗುಂಡು ಹಾರಿಸುತ್ತಲೇ ಇದ್ದ. ಗನ್‍ನ ಬುಲೆಟ್ ಮುಗಿಯುವುದರೊಂದಿಗೆ ಮಸೀದಿಯೊಳಗೆ ಮೌನ ಆವರಿಸಿತು. ಭಯೋತ್ಪಾದಕ ಹೋಗಿದ್ದಾನೆಯೇ ಇದ್ದಾನೆಯೇ ಎನ್ನುವ ವಿಷಯದಲ್ಲಿ ಯಾರಿಗೂ ಸ್ಪಷ್ಟತೆ ಇರಲಿಲ್ಲ. ಅಡಗಿ ಕೂತಿದ್ದ ಹಲವರನ್ನು ಹೊಗೆಯಿಂದಾಗಿ ಆತನಿಗೆ ಕಾಣಲು ಸಾಧ್ಯವಾಗಿರಲಿಲ್ಲ ದೇವನಿಗೆ ಸ್ತುತಿ. ಆದರೆ ಕ್ಷಣಗಳೊಳಗೆ ಆತ ಮರಳಿ ಬಂದ, ಹೋಗಿದ್ದಾನೆಂದು ಭಾವಿಸಿ ಹೊರ ಬಂದವರನ್ನೆಲ್ಲ ಗುಂಡಿಟ್ಟು ಕೊಂದ. ಮಸೀದಿಯ ಕಾರುಪಾರ್ಕಿಂಗ್ ಏರಿಯಕ್ಕೆ ಓಡಿ ಅಲ್ಲಿ ಅಡಗಿ ಕೂತವರು ಬದುಕುಳಿದರು.

ಕೆಲವರು ಕಟ್ಟಡದ ಮೇಲಿನಿಂದ ಕೆಳಗೆ ಹಾರಿದರು. ಪೊಲೀಸರಿಗೆ ಫೋನ್ ಮಾಡಲು ಹೊರಟ ವ್ಯಕ್ತಿಯೊಬ್ಬನನ್ನು ನೋಡಿ ಆತನನ್ನು ಕೂಡ ಭಯೋತ್ಪಾದಕ ಗುಂಡು ಹಾರಿಸಿ ಕೊಂದ. ಇಮಾಮ್ ಮತ್ತು ಕೆಲವರು ಪ್ರಧಾನ ಕೋಣೆಯಲ್ಲಿದ್ದರು. ಮಹಿಳೆಯರು ಪ್ರತ್ಯೇಕ ಕೋಣೆಯಲ್ಲಿ ಅಡಗಿ ಕೂತಿದ್ದರು. ಅಲ್ಲಿಂದ ಓಡಿ ಪಾರಾಗಲು ನೋಡಿದವರಿಗೆ ಗುಂಡೇಟು ತಗಲಿತು. ತಾನು ಬದುಕಿದ್ದೇನೆಂದು ಹೇಳಲು ಈಗಲೂ ತನ್ನಿಂದ ಸಾಧ್ಯವಾಗುವುದಿಲ್ಲ ಎಂದು ಇಮಾಮ್ ಫೌದ ಹೇಳಿದರು.

ಅಲ್‍ನೂರ್ ಮಸೀದಿಯಿಂದ ನಂತರ ಲಿನ್‍ವುಡ್ ಮಸೀದಿಗೆ ಹೋದ. ಏಳು ಮಂದಿ ಅಲ್ಲಿ ಮೃತಪಟ್ಟಿದ್ದಾರೆ. ಫೌದಾರ ಜೊತೆ ಅಲ್ಲಿನ ಇಮಾಮ್ ಕೂಡ ಅಲ್ಲಿದ್ದರು. ಅವರು ಹೇಳಿದರು ಅಝೀಝ್‍ರ ಅಡ್ಡ ಬರದಿರುತ್ತಿದ್ದರೆ ಲಿನ್‍ವುಡ್ ಮಸೀದಿಯಲ್ಲಿ ಮೃತರ ಸಂಖ್ಯೆ ಹೆಚ್ಚುತ್ತಿತ್ತು ಎಂದು ಇಮಾಂ ಲತೀಫ್ ಅಲಾಬಿ ಹೇಳಿದರು. ತಾನು ಕುತುಬಾ ನೀಡುತ್ತಿದ್ದೆ. 1:55ಕ್ಕೆ ಹೊರಗಿನಿಂದ ಗುಂಡಿನ ಶಬ್ದ ಕೇಳಿಸಿತು. ಕಿಟಕಿಯಿಂದ ಹೊರಗೆ ನೋಡಿದಾಗ ಒಬ್ಬ ಸೈನಿಕ ವೇಷಧಾರಿ ಗುಂಡು ಹಾರಿಸುವುದು ಕಾಣಿಸಿತು.

ಪೊಲೀಸಧಿಕಾರಿ ಎಂದು ಭಾವಿಸಿದೆ. ನಿಂದಿಸುತ್ತಾ ಪುನಃ ಗುಂಡು ಹಾರಿಸಿದಾಗ ಅಪಾಯದ ಮನವರಿಕೆಯಾಯಿತು. ಇದರೊಂದಿಗೆ ಮಸೀದಿಯಲ್ಲಿದ್ದ ಎಂಬತ್ತು ಮಂದಿಯನ್ನು ನೆಲದಲ್ಲಿ ಮಲಗಲು ಹೇಳಿದೆವು. ಆಗ ಒಂದು ಮೃತದೇಹ ಕಿಟಕಿಯ ಗಾಜು ಒಡೆದು ಒಳಗೆ ಬಂತು. ಆಗ ಅಬ್ದುಲ್ ಅಝೀಝ್ ಹೊರಗೆ ಓಡಿದರು. ಅವರು ಭಯೋತ್ಪಾದಕನನ್ನು ಒಳಗೆ ಬರಲು ಬಿಡಲಿಲ್ಲ. ಒಂದು ವೇಳೆ ಆತ ಮಸೀದಿಯೊಳಗೆ ಬಂದರೆ ನಾವೆಲ್ಲ ಇಲ್ಲದಾಗಿಬಿಡುತ್ತಿದ್ದೆವು. ಹೊರಗೆ ಹೋದಾಗ ಮೊದಲು ಅಝೀಝ್ ಕ್ರೆಡಿಟ್ ಕಾರ್ಡ್ ಮೆಶಿನ್ ಎತ್ತಿ ಭಯೋತ್ಪಾದಕನ ಮೇಲೆ ಎಸೆದರು. ಅಷ್ಟರಲ್ಲಿ ಬಂದೂಕು ಕೆಳಗೆ ಹಾಕಿದ ಆತ ಕಾರಿನಿಂದ ಇನ್ನೊಂದು ಮಿಶಿನ್ ಗನ್ ತಂದು ಅಝೀಝ್ ರ ಮೇಲೆ ಗುಂಡಿನ ಮಳೆಗರೆದನು. ನಿಂತಿದ್ದ ಕಾರಿನ ಹಿಂದೆ ಅಡಗಿ ಅಝೀಝ್ ಇದರಿಂದ ಪಾರಾದರು. ದುಷ್ಕರ್ಮಿಯ ಕೈಯಿಂದ ಬಿದ್ದ ಮೆಶಿನ್ ಗನ್ ಎತ್ತಿ ಗುಂಡು ಹಾರಿಸಲು ಅವರು ಯತ್ನಿಸಿದರೂ ಅದರಲ್ಲಿ ಗುಂಡುಗಳಿರಲಿಲ್ಲ. ಈ ವೇಳೆ ಅಬ್ದುಲ್ ಅಝೀಝ್ ಕಾರಿನ ಹತ್ತಿರ ಹೋದ ದುಷ್ಕರ್ಮಿಯ ಹಿಂದೆ ಹೋಗಿ ಅಝೀಝ್ ಕಾರಿನ ಗಾಜು ಒಡೆದರು. ಇದರೊಂದಿಗೆ ದುಷ್ಕರ್ಮಿ ಕಾರಿಗೆ ಹತ್ತಿ ತಪ್ಪಿಸಿಕೊಂಡಿದ್ದಾನೆ.

ದುಷ್ಕರ್ಮಿ ಬಂದಾಗ ಅಝೀಝ್ ಜೊತೆ ನಾಲ್ಕು ಮಕ್ಕಳು ಮಸೀದಿಯಲಿದ್ದರು. ಅಝೀಝ್ ದುಷ್ಕರ್ಮಿಯನ್ನು ಎದುರಿಸುವಾಗ ಹನ್ನೊಂದು ಮತ್ತು ಐದು ವಯಸ್ಸಿನ ಮಕ್ಕಳು ತಂದೆಯನ್ನು ಕರೆಯುತ್ತಿದ್ದರು. ಅದನ್ನು ಲೆಕ್ಕಿಸದೇ ಅಝೀಝ್ ಸಾಹಸಿಕವಾಗಿ ದುಷ್ಕರ್ಮಿಯನ್ನು ಎದುರಿಸಿ ಹಿಮ್ಮೆಟ್ಟಿಸಿದರು. 25 ವರ್ಷ ಬಾಲಕನಾಗಿದ್ದಾಗ ಅಫ್ಘಾನಿಸ್ತಾನ ತೊರೆದ ಅಝೀಝ್ 25 ವರ್ಷ ಆಸ್ಟ್ರೇಲಿಯದಲ್ಲಿದ್ದರು. ನ್ಯೂಝಿಲೆಂಡ್‍ಗೆ ಬಂದು ಎರಡು ವರ್ಷವಾಯಿತು. ತನ್ನ ಕೆಲಸವನ್ನು ದೊಡ್ಡ ದಿಟ್ಟತನವೆಂದು ತಾನು ಭಾವಿಸುವುದಿಲ್ಲ. ಇಂತಹದೊಂದು ಸಂದರ್ಭದಲ್ಲಿ ಯಾರು ಕೂಡ ಹೀಗೆಯೇ ಮಾಡುತ್ತಾರೆ ಎಂದು ಅಝೀಝ್ ಹೇಳುತ್ತಾರೆ.