ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ತಮಿಳುನಾಡಿನಲ್ಲಿ ಶಫೀಕ್ ಖಾಸ್ಮಿ ಬಂಧನ

0
3078

ತಿರುವನಂತಪುರಂ,ಮಾ.8: ಅಪ್ರಾಪ್ತ ವಯಸ್ಸಿನ ಹೈಸ್ಕೂಲ್ ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಘಟನೆಯಲ್ಲಿ ಆರೋಪಿಯಾದ ಇಮಾಂ ಶಫೀಕ್ ಅಲ್ ಖಾಸ್ಮಿಯನ್ನು ತಮಿಳುನಾಡಿನ ಮಧುರೆಯ ಲಾಡ್ಜೊಂದರಿಂದ ತಿರುವನಂತಪುರಂ ಕ್ರೈಂ ಬ್ರಾಂಚ್ ಡಿಟಾಚ್‍ಮೆಂಟ್ ಡಿವೈಎಸ್ಪಿ ಡಿ. ಅಶೋಕನ್ ನೇತೃತ್ವದ ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ಅಲ್ಲಿ ಅಡಗಿ ಕೂತುಕೊಳ್ಳಲು ನೆರವು ನೀಡಿದ ಫಾಝಿಲ್ ಎಂಬಾತನನ್ನು ಕೂಡ ಸೆರೆಹಿಡಿಯಲಾಗಿದೆ. ಗುರುವಾರ ರಾತ್ರೆ ಇಬ್ಬರನ್ನು ತಿರುವನಂತಪುರಂಕ್ಕೆ ಕರೆತರಲಾಗಿದೆ.

ಕಳೆದ ಫೆಬ್ರುವರಿ 12ಕ್ಕೆ ಬಾಲಕಿಯ ಮೇಲೆ ಅತ್ಯಾಚಾರ ವ್ಯಸಗಲು ಪ್ರಯತ್ನಿಸಿದ ಆರೋಪದಲ್ಲಿ ಶಫೀಕ್ ವಿರುದ್ಧ ವಿದುರ ಪೊಲೀಸರು ಪೊಕ್ಸೊ ಕಾನೂನು ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು. ತದನಂತರ ಈತ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಪೊಲೀಸರು ಲುಕ್‍ಔಟ್ ನೋಟೀಸು ಹೊರಡಿಸಿದ್ದರು.

ಖಾಸ್ಮಿ ಪಾರಾಗಲು ಸಹಾಯ ಮಾಡಿದ ಸಹೋದರಿ ಅಲ್ ಅಮೀನ್, ನೌಷಾದ್ ಎಂಬವರು ಮತ್ತು ಸಂಬಂಧಿಕರಾದ ಕಬೀರ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಸಹಾಯ ಮಾಡಿದ ಆರೋಪದಲ್ಲಿ ಪೊಲೀಸರು ಏಳು ಮಂದಿಯ ವಿರುದ್ಧ ಕೇಸು ದಾಖಲಿಸಿದ್ದಾರೆ.