ಮಲಪ್ಪುರಂನ ಅರಣ್ಯದೊಳಗೆ ಹೀಗೊಂದು ಹೈಟೆಕ್ ಸುಸಜ್ಜಿತ ಶಾಲೆ!

0
836

ಕರುಳಾಯಿ: ಎಪ್ಪತ್ತು ಲಕ್ಷರೂಪಾ ವೆಚ್ಚದಲ್ಲಿ ನಾಲ್ಕು ತರಗತಿ ಕೋಣೆಗಳಿರುವ ಹೈಟೆಕ್ ಶಾಲೆಯೊಂದು ಮಲಪ್ಪುರಂ ಸಮೀಪದ ಕರುಳಾಯಿಯ ಕಾಡಿನೊಳಗಿನ ನೆಡುಂಗಯ ಕಾಲನಿಯಲ್ಲಿ ಉದ್ಘಾಟನೆ ಗೊಂಡಿದೆ.

ಕೇರಳದಲ್ಲಿ ಆಧುನಿಕ ಸೌಲಭ್ಯಗಳ ನ್ನೊಳಗೊಂಡ ಅರಣ್ಯ ಪ್ರದೇಶದಲ್ಲಿ ಮೊದಲ ಬಾರಿಗೆ ಇಂತಹೊಂದು ಶಾಲೆಯನ್ನು ತೆರೆಯಲಾಗಿದೆ ಎನ್ನಲಾಗುತ್ತಿದೆ. ಸಂಸದ ಪಿ.ವಿ. ವಹಾಬ್‍ರ ಸಂಸದೀಯ ನಿಧಿಯಿಂದ ಶಾಲೆಗಾಗಿ ಎಪ್ಪತ್ತು ಲಕ್ಷ ರೂಪಾಯಿ ವೆಚ್ಚವನ್ನು ಭರಿಸಲಾಗಿದೆ. ಶಾಲೆಯನ್ನು ಸಂಸದ ಪಿ.ವಿ.ಅಬ್ದುಲ್ ವಹಾಬ್ ಶಾಲೆಯ ಉದ್ಘಾಟನೆಯನ್ನು ನಿರ್ವಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಪಿ.ವಿ ಅನ್ವರ್ ವಹಿಸಿದ್ದರು. ರೈಲಿನ ಮಾದರಿಯಲ್ಲಿ ಶಾಲೆಗೆ ಪೇಟಿಂಗ್ ಮಾಡಲಾಗಿದ್ದು ನಾಲ್ಕು ತರಗತಿ ಕೋಣೆಗಳಿವೆ. ಕೋಣೆಗಳಲ್ಲಿ ಚಿತ್ರಗಳನ್ನು ಬಿಡಿಸಲಾಗಿದ್ದು ಸುಂದರವಾಗಿ ಕಾಣಿಸುತ್ತಿದೆ. ಸಂಸದ ಪಿವಿ ಅಬ್ದುಲ್ ವಹಾಬ್‍ರ ಸಂಸದ ನಿಧಿಯಿಂದ ಶಾಲೆಗೆ ಅಗತ್ಯವಾದ ಹಣವನ್ನು ಭರಿಸಲಾಗಿದೆ. ಶಾಲೆಯ ಆವರಣದವರೆಗೆ ಹೊಸದಾದ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿದೆ. ಶಾಲೆಯ ಸುತ್ತಲೂ ಕಬ್ಬಿಣದ ಬೇಲಿ ಹಾಕಲಾಗಿದೆ.

ಕಾರ್ಯಕ್ರಮದಲ್ಲಿ ಅಧ್ಯಾಪಕ ಟಿ.ಕೆ. ವಿಜಯಕುಮಾರ್ ಎಂಬರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯ್ತು. ಮಲಪ್ಪುರಂ ಗ್ರಾಮ ಪಂಚಾಯತ್ ಅಧ್ಯಕ್ಷ ವಿ. ಅಸೈನಾರ್, ಉಪಾಧ್ಯಕ್ಷ ಕೆ. ಶೆರೀಫ್, ಜಿಲ್ಲಾಪಂಚಾಯತ್ ಸದಸ್ಯೆ ಸರೀನಾ ಮುಹಮ್ಮದಲಿ, ಕೆ. ಮನೋಜ್, ಪಿ.ಸುನೀರ್, ಡಿಎಫ್‍ಒ ಕೆ. ಸಜಿಕುಮಾರ್. ಲಯ, ಲಿಸಿಜೋಸ್, ಪಿಟಿಎ ಅಧ್ಯಕ್ಷ ಎನ್. ಶಿವರಾಜನ್ ಮುಂತಾದವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.