ಪೋಲೆಂಡ್ ಗಡಿಯ ಸಮೀಪವಿರುವ ಉಕ್ರೇನಿಯನ್ ಸೇನಾ ನೆಲೆಯ ಮೇಲೆ ರಷ್ಯಾದ ಕ್ಷಿಪಣಿ ದಾಳಿ

0
370

ಸನ್ಮಾರ್ಗ ವಾರ್ತೆ

ರಷ್ಯಾ-ಉಕ್ರೇನ್ ಯುದ್ಧಕ್ಕೆ 19 ದಿನಗಳು ಸಂದಿವೆ. ಇಲ್ಲಿಯವರೆಗೆ ‘ಸುರಕ್ಷಿತ ಸ್ವರ್ಗ’ವಾಗಿ ಉಳಿದಿದ್ದ ಉಕ್ರೇನ್‌ನ ಪಶ್ಚಿಮ ಭಾಗದಲ್ಲಿ ಈಗ ಹೋರಾಟ ತೀವ್ರಗೊಂಡಿದೆ. ನ್ಯಾಟೋ ಸದಸ್ಯ ಪೋಲೆಂಡ್‌ನ ಗಡಿಯಿಂದ ಕೇವಲ 12 ಮೈಲಿ ದೂರದಲ್ಲಿರುವ ಯವೊರಿವ್‌ನಲ್ಲಿನ ಮಿಲಿಟರಿ ತರಬೇತಿ ನೆಲೆಯ ಮೇಲೆ ರಷ್ಯಾದ ಪಡೆಗಳು ಭಾನುವಾರ ನಡೆಸಿದ ಕ್ರೂಸ್ ಕ್ಷಿಪಣಿಗಳ ದಾಳಿಗೆ 35 ಜನರನ್ನು ಮೃತರಾಗಿದ್ದು, 134 ಮಂದಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ 180 ವಿದೇಶಿ ಯೋಧರನ್ನು ಕೊಂದಿರುವುದಾಗಿ ರಷ್ಯಾ ಹೇಳಿಕೊಂಡಿದೆ.

ಮತ್ತೊಂದೆಡೆ, ಮೈಕೋಲೆವ್‌ನಲ್ಲಿ ರಷ್ಯಾದ ವಾಯುದಾಳಿಯಲ್ಲಿ ಒಂಬತ್ತು ನಾಗರಿಕರು ಸಾವನ್ನಪ್ಪಿದ್ದು, ಡಜನ್‌ಗಿಂತಲೂ ಹೆಚ್ಚು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಸ್ಪುಟ್ನಿಕ್ ಸುದ್ದಿ ಸಂಸ್ಥೆಯ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ಅಧಿಕಾರಿಗಳು ಇಂದು ಮತ್ತೆ ಶಾಂತಿ ಮಾತುಕತೆ ನಡೆಸಲಿದ್ದಾರೆ. ಈ ಸಂಭಾಷಣೆಯು ವೀಡಿಯೊ ಕರೆ ಮೂಲಕ ನಡೆಯಲಿದೆ ಎಂದು ವರದಿ ಮಾಡಿವೆ.