ಸನ್ಮಾರ್ಗ ವಾರ್ತೆ
ಪುಣೆ,ಜು.16: ಮಹಾರಾಷ್ಟ್ರದ ಸುರಕ್ಷಿತ ಜೈಲುಗಳಲ್ಲಿ ಒಂದಾದ ಪುಣೆಯ ಯರವಾಡ ಜೈಲಿನಿಂದ ಐದು ಕೈದಿಗಳು ತಪ್ಪಿಸಿಕೊಂಡಿದ್ದಾರೆ. ಈ ಪೈಕಿ 3 ಮಂದಿಯ ಮೇಲೆ ಕೊಲೆ ಪ್ರಕರಣವಿದೆ. ಘಟನೆಯ ನಂತರ ಇಡೀ ಪ್ರದೇಶವನ್ನು ಮೊಹರು ಮಾಡಲಾಗಿದೆ. ಹುಡುಕಾಟ ಕಾರ್ಯವನ್ನು ಇಲ್ಲಿ ತೀವ್ರಗೊಳಿಸಲಾಗಿದೆ. ಬೀಗ ಬಂದೋಬಸ್ತ್ ಹಾಕಿರುವುದರಿಂದಾಗಿ ಕೈದಿಗಳು ಇನ್ನೂ ನಗರದಿಂದ ತಪ್ಪಿಸಿಕೊಂಡಿರಲಿಕ್ಕಿಲ್ಲ ಎಂದು ಪೊಲೀಸರು ನಂಬುತ್ತಾರೆ.
ಮಾಹಿತಿಯ ಪ್ರಕಾರ, ಈ ಕೈದಿಗಳು ಬುಧವಾರ ತಡರಾತ್ರಿ ಜೈಲಿನ ಹೊಸ ಕಟ್ಟಡದ ಕೊಠಡಿ ಸಂಖ್ಯೆ 5ರಲ್ಲಿ ಕಿಟಕಿ ಗ್ರಿಲ್ ಕತ್ತರಿಸಿ ತಪ್ಪಿಸಿಕೊಂಡಿದ್ದಾರೆ. ದೇವಗನ್ ಅಜಿನಾಥ್ ಚೌಹಾಣ್, ಗಣೇಶ್ ಅಜಿನಾಥ್ ಚೌಹಾಣ್, ಅಕ್ಷಯ್ ಕೊಂಡಕ್ಯ ಚೌಹಾಣ್, ಅಜಿಂಕ್ಯ ಉತ್ತಮ್ ಕಾಂಬ್ಳೆ ಮತ್ತು ಸನ್ನಿ ಟೈರೋನ್ ಪಿಂಟೊ ಎಂದು ಕೈದಿಗಳನ್ನು ಗುರುತಿಸಲಾಗಿದ್ದು, ಕೈದಿಗಳ ಛಾಯಾಚಿತ್ರಗಳನ್ನು ಹತ್ತಿರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದೆ.
ಜೈಲು ಆಡಳಿತದ ಪ್ರಕಾರ, ಇವರೆಲ್ಲರೂ ಹೊಸ ಕೈದಿಗಳಾಗಿದ್ದು, ಅವರನ್ನು ಇತ್ತೀಚೆಗೆ ಯರವಾಢ ಬಳಿಯ ಹಾಸ್ಟೆಲ್ನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಜೈಲಿನಲ್ಲಿ ಇರಿಸಲಾಗಿತ್ತು. ಮಹಾರಾಷ್ಟ್ರದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ವ್ಯಾಪಕ ಹರಡುವಿಕೆಯಿಂದಾಗಿ ಕೈದಿಗಳನ್ನು ತಾತ್ಕಾಲಿಕವಾಗಿ ಅಲ್ಲಿ ಇರಿಸಲಾಗಿತ್ತು. ಅವರ ಕೊರೋನಾ ಪರೀಕ್ಷೆಯನ್ನು ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿತ್ತು. ಒಂದು ವೇಳೇ ಕೊರೋನ ಇಲ್ಲವೆಂದು ದೃಢವಾದಲ್ಲಿ ಅವರನ್ನು ನಂತರ ಮುಖ್ಯ ಜೈಲಿಗೆ ಸ್ಥಳಾಂತರಿಸಲಾಗುತ್ತಿತ್ತು ಎಂದು ಮಾಹಿತಿ ಲಭಿಸಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












