2021ರ ಫೆಬ್ರುವರಿ ವೇಳೆ ಭಾರತೀಯರಲ್ಲಿ ಅರ್ಧದಷ್ಟು ಮಂದಿಗೆ ಕೊರೋನ ಹರಡಬಹುದು- ಕೇಂದ್ರ ಸರಕಾರದ ಸಮಿತಿ

0
8248

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.20: ಭಾರತದ ಜನಸಂಖ್ಯೆಯಲ್ಲಿ ಅರ್ಧಾಂಶ ಮಂದಿಗೆ 2021 ಫೆಬ್ರುವರಿ ವೇಳೆಗೆ ಕೊರೋನ ಹರಡಲಿದೆ ಎಂದು ಕೇಂದ್ರ ಸರಕಾರ ನೇಮಿಸಿದ ಸಮಿತಿ ಹೇಳಿದೆ. ಈಗ ಕೊರನೋದಲ್ಲಿ ಅಮೆರಿಕದ ನಂತರದ ಸ್ಥಾನ ಭಾರತಕ್ಕಿದೆ.

“ನಾವು ಲೆಕ್ಕವನ್ನು ಭಾರತದ ಜನರಲ್ಲಿ ಶೆ.30ರಷ್ಟು ಮಂದಿಗೆ ಕೊರೋನ ತಗಲಿರಬಹುದು ಎಂದು ತೋರಿಸುತ್ತಿದ್ದೇವೆ. ಇದು ಫೆಬ್ರುವರಿಯಲ್ಲಿ ಶೇ.50ರಷ್ಟಾಗಬಹುದು” ಎಂದು ಕಾನ್‍ಪುರದ ಐಐಟಿಯ ಪ್ರೊಫೆಸರ್ ಸಮಿತಿ ಸದಸ್ಯ ಮನೀಂದ್ರ ಅಗರವಾಲ್ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಕೊರೋನ ಈಗಿನ ಹರಡುವಿಕೆ ಕೇಂದ್ರ ಸರಕಾರದ ಈಗಿನ ಲೆಕ್ಕಕ್ಕಿಂತ ಹೆಚ್ಚು ಆಗಿದೆ. ಕೆಂದ್ರ ಸರಕಾರ ಸೆಪ್ಟಂಬರಿನಲ್ಲಿ ನೀಡಿದ ಲೆಕ್ಕಗಳ ಪ್ರಕಾರ ದೇಶದಲ್ಲಿ ಶೇ.14ರಷ್ಟು ಮಂದಿಗೆ ವೈರಸ್ ಹರಡಿದೆ.

ಭಾರತದಲ್ಲಿ ಭಾರೀ ಜನಸಂಖ್ಯೆ ಇದ್ದುದರಿಂದ ಕೇಂದ್ರ ಸರಕಾರದ ಸಿರೊಜಿಕಲ್ ಸಮೀಕ್ಷೆಗಳಿಗೆ ಸ್ಯಾಂಪಲ್‍ಗಳನ್ನು ಪೂರ್ಣವಾಗಿ ಸಂಗ್ರಹಿಸಲು ಸಾಧ್ಯವಾಗಿಲ್ಲ. ಆದುದರಿಂದ ನಾವು ವರದಿ ಮಾಡಿದ ಪ್ರಕರಣಗಳನ್ನು ಪರಿಗಣಿಸುವುದರ ಜೊತೆ ಹೊಸ ಲೆಕ್ಕವನ್ನೂ ಅವಲಂಬಿಸುತ್ತಿದ್ದೇವೆ ಎಂದು ಮನೀಂದ್ರ ಅಗರ್‍ವಾಲ್ ಹೇಳಿದರು.

ಕೊರೋನ ಪ್ರೊಟೊಕಾಲ್‍ಗಳನ್ನು ಬಲವಾಗಿ ಅವಲಂಬಿಸಬೇಕೆಂದು ಸಮಿತಿ ಎಚ್ಚರಿಕೆ ನೀಡಿದೆ. ರಜಾ ಕಾಲ ಮತ್ತು ದುರ್ಗಾ ಪೂಜೆ, ದೀಪಾವಳಿ ಸಹಿತ ಹಬ್ಬಗಳು ಬರುವುದು ಕೊರೋನ ಅನಿಯಂತ್ರಿತವಾಗಿ ಹೆಚ್ಚಲು ಕಾರಣವಾಗಬಹುದೆಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ.