ಸಂಪೂರ್ಣ ಮಹಿಳೆಯರ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಗಾಝದ ಬಟಾಟೆ ಪ್ಯಾಕ್ಟರಿ

0
1287

ಗಾಝ ಸಿಟಿ: ಗಾಝದ ರೋಸ್ಟ್ ಪ್ಯಾಕ್ಟರಿಗೆ ಹೋದರೆ ಅಲ್ಲಿ ಸಂಪೂರ್ಣ ಮಹಿಳೆಯರ ನಿಯಂತ್ರಣ ಇರುವುದು ಗೊತ್ತಾಗುತ್ತದೆ. ಎಲ್ಲ ಕಡೆಯೂ ಮಹಿಳೆಯರೇ ಕಂಡು ಬರುತ್ತಿದ್ದಾರೆ. ಗಾಝದ ಸಣ್ಣ ಹೊಟೇಲುಗಳಿಂದ ದೊಡ್ಡ ರೆಸ್ಟುರಾಗಳವರೆಗೆ ಪೊಟೆಟೊ ಚಿಪ್ಸ್ ಈ ಪ್ಯಾಕ್ಟರಿಯಿಂದ ಕಳುಹಿಸಿಕೊಡಲಾಗುತ್ತಿದೆ. ಇಸ್ರೇಲಿನ ಬಾಂಬ್ ಬೆದರಿಕೆಯ ನಡುವೆ ಮಹಿಳೆಯರು ಮಾತ್ರ ಕೆಲಸ ಮಾಡಿ ಮೇಲ್ನೋಟ ವಹಿಸುತ್ತಾ ಪ್ಯಾಕ್ಟರಿಯನ್ನು ಮುನ್ನಡೆಸುತ್ತಿದ್ದಾರೆ.

ಫೆಲಸ್ತೀನಿ ಬಟಾಟೆ ರೈತರಿಗೆ ಈ ಪ್ಯಾಕ್ಟರಿ ಸಹಕಾರಿಯಾಗಿದೆ. ರೈತರಿಗೆ ಸಹಾಯವೂ ಮಹಿಳೆಯರಿಗೆ ಕೆಲಸವೂ ಆಗುತ್ತದೆ ಎಂದು ರೋಸ್ಟ್ ಪ್ಯಾಕ್ಟರಿ ಆರಂಭಿಸಿದೆವೆಂದು ರೊಸ್ಟ್ ಪ್ಯಾಕ್ಟರಿ ಮ್ಯಾನೇಜರ್ ರಹೀಂ ಅಲ್ ಮದ್‍ಹಾನ್ ಹೇಳುತ್ತಾರೆ. ಇಲ್ಲಿ ಕೆಲಸ ಮಹಿಳೆಯರು ಮಾಡುತ್ತಾರೆ. ಅಂದರೆ ಇವರ ದುಡಿಮೆಯಲ್ಲಿ ಅವರ ಕುಟುಂಬದ ಜೀವನ ನಡೆಯುತ್ತಿದೆ. ಇವರಲ್ಲಿ ಹೆಚ್ಚಿನ ಮಹಿಳೆಯರು ಪದವೀಧರರು. ಆದರೆ ಇವರಿಗೆ ಗಾಝದಲ್ಲಿ ಬೇರೆ ಕೆಲಸಗಳಿಗೆ ಅವಕಾಶ ಇಲ್ಲ ಆದ್ದರಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ರಿಹಾಂ ಹೇಳುತ್ತಾರೆ.

ಬಟಾಟೆಯನ್ನು ರೈತರಿಂದ ನೇರವಾಗಿ ಖರೀದಿಸಿ ಫ್ಯಾಕ್ಟರಿಗೆ ತಂದು ಅದರ ಸಿಪ್ಪೆ ತೆಗೆದು ಮಿಶಿನ್‍ಗೆ ಹಾಕಿ ಉದ್ದಕ್ಕೆ ಕತ್ತರಿಸಿ ಎಣ್ಣೆಯಲ್ಲಿ ಹುರಿಯುವುದು ಇವರು. ನಂತರ ಇತರ ಕಡೆ ರೆಸ್ಟೋರೆಂಟ್, ಹೊಟೇಲ್‍ಗಳಿಗೆ ಕಳುಹಿಸುವುದೂ ಇವರೇ. ಪ್ಯಾಕ್ಟರಿಗೆ ವಿದ್ಯುತ್ ಸಂಪರ್ಕ ಆಗಾಗ ಕಡಿದು ಹೋಗುತ್ತದೆ ಇದು ನಾವು ಎದುರಿಸುವ ದೊಡ್ಡ ಸಮಸ್ಯೆ ಎಂದು ರಿಹಾಂ ಹೇಳುತ್ತಾರೆ.