“ನಾಗರಿಕ ಪ್ರಣಾಳಿಕೆ” ಬಿಡುಗಡೆಗೊಳಿಸಿದ ಜಮಾಅತೆ ಇಸ್ಲಾಮೀ ಹಿಂದ್

0
1913

ನವದೆಹಲಿ: ಮುಂಬರುತ್ತಿರುವ ಲೋಕಸಭಾ ಚುನಾವಣೆಗಾಗಿ ನಾಗರಿಕ ಪ್ರಣಾಳಿಕೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಬಿಡುಗಡೆಗೊಳಿಸಿತು. ಈ ಸಂದರ್ಭದಲ್ಲಿ ಜ.ಇ.ಹಿಂದ್ ನ ರಾಷ್ಟ್ರಾಧ್ಯಕ್ಷರಾದ ಮೌಲಾನ ಜಲಾಲುದ್ದೀನ್ ಉಮರಿಯವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ” ವಿವಿಧ ರಾಜಕೀಯ ಪಕ್ಷಗಳು ಹಾಗೂ ಇತರೆ ವಿಭಾಗದವರನ್ನು ಸಂದರ್ಶಿಸಲು ಮತ್ತು ಭೇಟಿ ನೀಡಲು ಮುಂದಾಗುತ್ತಿದ್ದು ಈ ಸಂದರ್ಭದಲ್ಲಿ ನಾವು ತಯಾರಿಸಿರುವ ನಾಗರಿಕ ಪ್ರಣಾಳಿಕೆಯನ್ನು ಜನರ ಪ್ರಣಾಳಿಕೆಯಾಗಿ ಪರಿಗಣಿಸಿ ತಮ್ಮ ಚುನಾವಣಾ ಪ್ರಣಾಳಿಕೆಯನ್ನಾಗಿಸಿಕೊಳ್ಳಬೇಕೆಂಬ ಬೇಡಿಕೆಯನ್ನು ಇರಿಸಲಿದ್ದೇವೆ ಎಂದರು.

ಜಮಾಅತೆ ಇಸ್ಲಾಮೀ ಹಿಂದ್‍ನ ಪ್ರಧಾನ ಕಾರ್ಯದರ್ಶಿ ಯಾದ ಡಾ. ಸಲೀಮ್ ಇಂಜನೀಯರ್‍ರವರು ಬಿಡುಗಡೆಗೊಳಿಸಿರುವ ನಾಗರಿಕ ಪ್ರಣಾಳಿಕೆಯು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.
ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ದೇಶದ ಎಲ್ಲ ಪ್ರಜೆಗಳಿಗೆ ಸಮಾನ ಅವಕಾಶವನ್ನು ನೀಡುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಈ ನಾಗರಿಕ ಪ್ರಣಾಳಿಕೆಯನ್ನು ತಮ್ಮ ಚುನಾವಣಾ ಪ್ರಣಾಳಿಕೆಯಾಗಿ ಪರಿಗಣಿಸಬೇಕಿದೆ.

1. ಶುದ್ಧ ಗಾಳಿ, ನೀರು, ಆಹಾರ, ವಾಸ್ತವ್ಯ, ಶಿಕ್ಷಣ, ಆರೋಗ್ಯ ಸೇವೆ, ಸ್ವಚ್ಛ ವಾತಾವರಣ ಹಾಗೂ ಜೀವದ ಸಂರಕ್ಷಣೆಯಂತಹ ಮೂಲಭೂತ ಸೌಕರ್ಯಗಳನ್ನು ಎಲ್ಲ ಪ್ರಜೆಗಳಿಗೂ ಒದಗಿಸುವುದು.

•”ಅನ್ಯಾಯ, ಅಕ್ರಮ, ಗುಂಪು ಹಿಂಸೆ, ಕೋಮು ದ್ವೇಷ ಪೂರಿತ ದಾಳಿಗಳಿಂದ ಜನರಿಗೆ (ಮಹಿಳೆಯರ, ಮುಸ್ಲಿಮರ, ಕಡೆಗಣಿಸಲ್ಪಟ್ಟವರ) ಸಂರಕ್ಷಣೆ ನೀಡುವುದು.”

•ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಕುರಿತು ಅಪ ಪ್ರಚಾರಗಳನ್ನು ನಡೆಸಲಾಗುತ್ತಿದೆ. ಮುಸ್ಲಿಮರ ಧಾರ್ಮಿಕ ಆಚರಣೆಗಳು ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತು ಅಪಪ್ರಚಾರಗಳನ್ನು ನಡೆಸಲಾಗುತ್ತಿದೆ. ಸಂವಿಧಾನದ ಅಡಿಪಾಯದಲ್ಲಿಯೇ ಅವರ ಹಕ್ಕುಗಳನ್ನು ಸಂರಕ್ಷಿಸುವ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ.

•”ಎಲ್ಲ ಪ್ರದೇಶಗಳು ಮತ್ತು ವಿಭಾಗಗಳ ಸಮಗ್ರ ಆರೋಗ್ಯಕರ ಅಭಿವೃದ್ಧಿ, ನಿರ್ದಿಷ್ಟವಾಗಿ ಅಭಿವೃದ್ಧಿ ಹೊಂದದ ಪ್ರದೇಶಗಳ ಬೆಳವಣಿಗೆಗೆ ಗಮನ ಹರಿಸುವುದು, ಪರಿಶಿಷ್ಟ ಜಾತಿಗಳು, ನಿಗದಿತ ಬುಡಕಟ್ಟುಗಳು, ಮುಸ್ಲಿಮರು, ಗ್ರಾಮೀಣ ಜನಸಂಖ್ಯೆ ಮತ್ತು ವಂಚಿತ ವರ್ಗಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸುವುದು.

•”ಅಲ್ಪಸಂಖ್ಯಾತರ ಧಾರ್ಮಿಕ, ಭಾಷಾ ಮತ್ತು ಸಾಂಸ್ಕೃತಿಕ ಹಕ್ಕುಗಳಿಗೆ ಹಾಗೂ ವಿವಿಧ ಭಾಷಾ ಗುಂಪುಗಳು ಮತ್ತು ಸಾಂಸ್ಕೃತಿಕ ಘಟಕಗಳಿಗೆ ರಕ್ಷಣೆ ನೀಡುವುದು. ಇದರಲ್ಲಿ ವೈಯಕ್ತಿಕ ಕಾನೂನು, ಆರಾಧನಾ ಸ್ಥಳಗಳು ಮತ್ತು ಇತರ ಧಾರ್ಮಿಕ ಸ್ಥಳಗಳಿಗೆ ರಕ್ಷಣೆ ನೀಡುವಂತೆ ಸೂಚಿಸುತ್ತದೆ.

•”ಭಾರತೀಯ ಮುಸ್ಲಿಮರು ಹಕ್ಕು ವಂಚಿತರಾಗಿದ್ದಾರೆ, ಅವರಿಗೆ ಮೀಸಲಾತಿ ನೀಡುವ ಅಗತ್ಯತೆ ಇದೆ. ಹಾಗಾಗಿ ರಂಗನಾಥ ಮಿಶ್ರಾ ಸಮಿತಿಯ ವರದಿಯನ್ನು ಜಾರಿಗೊಳಿಸಬೇಕು. ಎಲ್ಲ ಅಲ್ಪಸಂಖ್ಯಾತರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಬೇಕು. ಇಂತಹ ಮೀಸಲು ಸ್ಥಾನಗಳಲ್ಲಿ; ಮುಸ್ಲಿಮರಿಗಾಗಿ ಮೂರನೇ ಎರಡು ಪ್ರತಿಶತ ಗುರುತಿಸಬೇಕು.

•”ರಾಷ್ಟ್ರೀಯ ಪೊಲೀಸ್ ಆಯೋಗದ ಶಿಫಾರಸುಗಳನ್ನು ಅನುಸರಿಸಬೇಕು. ಪೊಲೀಸರನ್ನು ಪುನರುಜ್ಜೀವನಗೊಳಿಸಲು ಸಮಗ್ರ ಸುಧಾರಣಾ ಕ್ರಮಗಳನ್ನು ಪ್ರಾರಂಭಿಸಬೇಕು. ಅಲ್ಪಸಂಖ್ಯಾತರಿಗೆ 25 ಶೇ. ಮೀಸಲಾತಿಯನ್ನು ನೀಡಬೇಕು. ರಾಷ್ಟ್ರೀಯ ಅಲ್ಪಸಂಖ್ಯಾತರ ಸಮಿತಿಯು ನೀಡಿದ ಪೊಲೀಸ್ ಬಗೆಗಿನ ಶಿಫಾರಸುಗಳನ್ನು ಸಹ ಜಾರಿಗೊಳಿಸಬೇಕು.

•”ಸಾಚಾರ್ ಸಮಿತಿ ಶಿಫಾರಸುಗಳನ್ನು ಕಾನೂನಾತ್ಮಕವಾಗಿ ಅಳವಡಿಸಬೇಕು. ಕಲ್ಯಾಣ ಯೋಜನೆಗಳಲ್ಲಿ, `ಮುಸ್ಲಿಂ ಘಟಕ ಯೋಜನೆ’ಯನ್ನು ಏಕರೂಪವಾಗಿ ಸೇರಿಸಬೇಕು.

•”ಪ್ರತಿ ಸಮುದಾಯದ ಸಾಂಸ್ಕೃತಿಕ ಗುರುತನ್ನು ರಕ್ಷಿಸಬೇಕು. ರಾಜಕೀಯ ಸಂಸ್ಥೆಯು ಸಾರ್ವತ್ರಿಕ ನೈತಿಕ ಮೌಲ್ಯಗಳನ್ನು ಅನುಸರಿಸಬೇಕು. ಇದು ಆಡಳಿತ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಪುನಃ ಸ್ಥಾಪಿಸುತ್ತದೆ. ಇದು ಜನರೊಂದಿಗೆ ಹೆಚ್ಚಿನ ಸಹಕಾರವನ್ನು ಹೊಂದುವಂತೆ ಮಾಡುತ್ತದೆ.

•”ಬ್ಯಾಂಕಿಂಗ್ ವಲಯದಲ್ಲಿ ಬಡ್ಡಿ ಮುಕ್ತ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸಬೇಕು. ಡಾ. ರಘು ರಾಮ್ ರಾಜನ್ ಹಣಕಾಸು ಕ್ಷೇತ್ರ ಸುಧಾರಣೆಗಳನ್ನು ಚರ್ಚಿಸಿದ ಯೋಜನಾ ಆಯೋಗದ ಉಪ ಸಮಿತಿಯ ನೇತೃತ್ವ ವಹಿಸಿದ್ದರು. ಈ ಸಮಿತಿಯು ನೀಡಿರುವ ಶಿಫಾರಸುಗಳಿಗೆ ಅನುಗುಣವಾಗಿ, ಬಡ್ಡಿ ರಹಿತ ಬ್ಯಾಂಕಿಂಗ್ ಚಟುವಟಿಕೆಯನ್ನು (ಲಾಭ ಹಂಚಿಕೆ ಆಧಾರಿತ) ಅನುಮತಿಸಬೇಕು.

ಜಮಾಅತೆ ಇಸ್ಲಾಮಿ ಹಿಂದ್ ಮತದಾರರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಭರವಸೆಗಳೊಂದಿಗೆ ಈ ಪ್ರಣಾಳಿಕೆಯನ್ನು ಪ್ರಸ್ತಾಪಿಸುತ್ತದೆ. ಈ ಅಂಶಗಳು ಜನರ ನಿಜವಾದ ಭಾವನೆಗಳನ್ನು ಪ್ರತಿಬಿಂಬಿಸುತ್ತವೆ. ಉತ್ತಮ ತತ್ವಗಳನ್ನು ಹೊಂದಿದ ರಾಜಕೀಯ ಪಕ್ಷಗಳು ಜನರ ಪ್ರತಿನಿಧಿಗಳಾಗಬೇಕೆಂದು ಅದು ಆಗ್ರಹಿಸುತ್ತದೆ. ಜಮಾಅತೆ ಇಸ್ಲಾಮೀ ಹಿಂದ್ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲವಾದರೂ ಚುನಾವಣೆಗಳ ಪ್ರಾಮುಖ್ಯತೆಯ ದೃಷ್ಟಿಯಿಂದ, ಈ ಹಂತದಲ್ಲಿ ಜನರನ್ನು ಹಾಗೂ ಅವರ ನಿರ್ಣಾಯಕ ಪಾತ್ರವನ್ನು ಪ್ರತಿನಿಧಿಸುತ್ತದೆ ಎಂದರು.