6 ಲಕ್ಷ ವೈದ್ಯರು, 2 ಮಿಲಿಯನ್ ದಾದಿಯರ ಕೊರತೆ ಎದುರಿಸುತ್ತಿರುವ ಭಾರತ,: ಹಿಂದೂಸ್ತಾನ್ ಟೈಮ್ಸ್ ನಲ್ಲಿ ಅಧ್ಯಯನ ವರದಿ

0
561

ಭಾರತ ಅಂದಾಜು 6,00,000 ವೈದ್ಯರು ಮತ್ತು 2 ಮಿಲಿಯನ್ ದಾದಿಯರ ಕೊರತೆಯನ್ನು ಎದುರಿಸುತ್ತಿದೆ. ರೋಗಗಳನ್ನು ತಡೆಗಟ್ಟುವುದಕ್ಕಾಗಿ ಆಂಟಿ ಬಯಾಟಿಕ್ಸ್ ನೀಡುವ ತರಬೇತಿ ಹೊಂದಿದ ಸಿಬ್ಬಂದಿಗಳ ಕೊರತೆ ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆಂಟಿಬಯಾಟಿಕ್ಸ್ ಲಭ್ಯವಿದ್ದರೂ ರೋಗಿಗಳು ಸಾಮಾನ್ಯವಾಗಿ ಅವುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಆರೋಗ್ಯ ಸೇವೆಗಳಿಗೆ ಸೀಮಿತ ಖರ್ಚು ಮಾಡುವ ಮೂಲಕ ಬಡ ರೋಗಿಗಳಿಗೆ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಅಮೇರಿಕದ ಮತ್ತು ಭಾರತದ ರೋಗನಿರ್ಣಯ ಮತ್ತು ಅರ್ಥಶಾಸ್ತ್ರ ಮತ್ತು ನೀತಿ ಕೇಂದ್ರದ ವರದಿ ಪ್ರಕಾರ, ಶೇ 65 ರಷ್ಟು ಆರೋಗ್ಯ ವೆಚ್ಚಗಳು ತುಟ್ಟಿಯಾಗಿವೆ ಮತ್ತು ಇಂತಹ ಖರ್ಚುಗಳು 57 ಮಿಲಿಯನ್ ಜನರನ್ನು ಪ್ರತಿವರ್ಷ ಬಡತನಕ್ಕೆ ತಳ್ಳುತ್ತಿದೆ.

ಪ್ರಪಂಚದಲ್ಲಿ ಆಂಟಿಬಯಾಟಿಕ್ಸ್ ಗಳಿಂದ ಚಿಕಿತ್ಸಿಸಬಹುದಾದ 5.7 ಮಿಲಿಯನ್ ಸಾವುಗಳು ಪ್ರತಿವರ್ಷ ಸಂಭವಿಸುತ್ತಿದ್ದು, ಬಹುಪಾಲು ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಈ ಸಾವುಗಳು ಕಂಡುಬರುತ್ತವೆ. ಅಲ್ಲಿ ಬ್ಯಾಕ್ಟೀರಿಯಾದ ಸೋಂಕಿನಿಂದ ಸಾವನ್ನಪ್ಪುವ ಪ್ರಮಾಣಕ್ಕಿಂತಲೂ ಅಂದಾಜು ವಾರ್ಷಿಕ 7,00,000 ಸಾವುಗಳು ಆಂಟಿಬಯಾಟಿಕ್ಸ್ -ನಿರೋಧಕ ಸೋಂಕಿನಿಂದಾಗುತ್ತದೆ.

ಭಾರತದಲ್ಲಿ ಪ್ರತಿ 10,189 ಜನರಿಗೆ ಒಬ್ಬರು ಸರ್ಕಾರಿ ವೈದ್ಯರಿದ್ದಾರೆ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ಸಾವಿರಕ್ಕೆ ಓರ್ವ ವೈದ್ಯರಿರಬೇಕೆಂದು ಹೇಳುತ್ತದೆ. ಪ್ರಸ್ತುತ ಆಂಟಿಬಯಾಟಿಕ್ಸ್ ಪ್ರತಿರೋಧಕ್ಕಿಂತಲೂ ಆಂಟಿಬಯಾಟಿಕ್ಸ್ ಕೊರತೆಯು ಹೆಚ್ಚಿನ ಜನರನ್ನು ಕೊಲ್ಲುತ್ತಿದೆ.