ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೊರೋನ ಎರಡನೇ ಅಲೆಯು ಅತ್ಯಂತ ತೀವ್ರವಾಗಿ ದೇಶದಲ್ಲಿ ಹರಡುತ್ತಿದ್ದು ಆಗ್ರಾದ ಗ್ರಾಮಗಳಲ್ಲಿ ರೋಗ ತೀವ್ರವಾಗಿ ಬಾಧಿಸಿದೆ. ಆಗ್ರಾದ ಎರಡು ಗ್ರಾಮಗಳಲ್ಲಿ 20 ದಿನಗಳ ಅಂತರದಲ್ಲಿ 64 ಮಂದಿ ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಈ ಎರಡು ಗ್ರಾಮದ ಜನರಿಗೆ ಕೊರೋನದ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ವರದಿಯಾಗಿದ್ದು, ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿ ಇಷ್ಟು ದೊಡ್ಡ ಘಟನೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಆಗ್ರಾದಿಂದ 12 ಕಿ ಲೋ ಮೀಟರ್ ದೂರದ ಬಾಮರುಳಿ ಕಾತ್ರ ಗ್ರಾಮದಲ್ಲಿ ಕೊರೊನ ರೋಗ ಲಕ್ಷಣಗಳಿರುವ 50 ಮಂದಿ ಮೃತಪಟ್ಟಿದ್ದಾರೆ. ಹಲವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ದಾರಿ ಮಧ್ಯೆ ಹಲವು ಮಂದಿ ಮೃತಪಟ್ಟಿದ್ದಾರೆ. ಇದಾದ ನಂತರ ಇಲ್ಲಿಗೆ ಆರೋಗ್ಯ ಇಲಾಖೆಯವರು ಬಂದು ಕೊರೋದಿಂದ ಮೃತಪಟ್ಟಿರುವುದಾಗಿ ದೃಢೀಕರಿಸಿಕೊಂಡಿದೆ.
ಸುಮಾರು ನಲ್ವತ್ತು ಸಾವಿರ ಮಂದಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಆದರೆ 46 ಮಂದಿ ಮಾತ್ರ ಪರೀಕ್ಷೆಗೆ ಬಂದಿದ್ದರು. ಚುನಾವಣೆಯ ನಂತರ ಕೊರೊನ ಹರಡಲು ಶುರುವಾಗಿತ್ತು ಎಂದು ವರದಿಗಳು ತಿಳಿಸಿವೆ. ಎಮಾಡುಪರದ ಸ್ಥಿತಿಕೂಡ ಚಿಂತಾಜನಕವಾಗಿದೆ. ಇದು ಆಗ್ರದಿಂದ 40 ಕಿ ಲೋ ಮೀಟರ್ ದೂರದಲ್ಲಿರುವ ಗ್ರಾಮವಾಗಿದೆ.
ಕೊರೊನ ಲಕ್ಷಣಗಳನ್ನು ಹೊಂದಿದ ಹದಿನಾಲ್ಕು ಮಂದಿ ಇಲ್ಲಿ ಮೃತಪಟ್ಟಿದ್ದಾರೆ. 100 ಮಂದಿಗೆ ಪರೀಕ್ಷೆ ನಡೆಸಲಾಯಿತು. ಇದರಲ್ಲಿ 24 ಮಂದಿಗೆ ಕೊರೋನ ಇರುವುದು ದೃಢಪಟ್ಟಿತ್ತು. ರೋಗಿಗಳ ಸಮೀಪದ ಶಾಲೆಯನ್ನು ಐಸೊಲೇಶನ್ ಸೆಂಟರ್ ಮಾಡಲಾಗಿದೆ. ರೋಗಿಗಳಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಾಗ ಆಕ್ಸಿಜನ್ ನೀಡುವ ವ್ಯವಸ್ಥೆ ಇಲ್ಲಿಲ್ಲ. ಇದೇ ವೇಳೆ ಗ್ರಾಮಸ್ಥರು ಕೋರೋನ ಬಗ್ಗೆ ಭಯ ಭೀತರಾಗಿರುವುದರಿಂದ ಕೊರೋನ ಪರೀಕ್ಷೆಗೆ ಮುಂದೆ ಬರುತ್ತಿಲ್ಲ. ಇದು ಮತ್ತಷ್ಟು ಜನರಿಗೆ ಹರಡಲು ಕಾರಣವಾಗುತ್ತಿದೆ ಎಂದು ಆರೋಗ್ಯ ಕಾರ್ಯಕರ್ತರು ಹೇಳುತ್ತಿದ್ದಾರೆ.












