ಲಾಕ್ ಡೌನ್ ನಿಂದ ನಿರುದ್ಯೋಗ: ಪತ್ನಿ ಮಗನ ಕೊಲೆಗೈದು ಆತ್ಮಹತ್ಯೆಗೈದ ಯುವಕ

0
930

ಸನ್ಮಾರ್ಗ ವಾರ್ತೆ

ಪುಣೆ: ಕೊರೋನದಿಂದ ಮಹಾರಾಷ್ಟ್ರದಲ್ಲಿ ಸಂಪೂರ್ಣ ಲಾಕ್ ಡೌನ್‍ಗೆ ಮಾಡಿರುವುದರಿಂದ ಕೆಲಸ ಇಲ್ಲದಾಗಿ ಪತ್ನಿ ಮತ್ತು ತನ್ನ ಪುತ್ರನನ್ನು ಕೊಂದ ಯುವಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹರಾಷ್ಟ್ರದ ಪುಣೆಯ ಕಾಡಂವಾಕ್ ಎಂಬಲ್ಲಿ ಘಟಿಸಿದೆ.

ಹನುಮಂತ ಧರ್ಯಪ್ಪ ಸಿಂಧೆ(38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಪತ್ನಿ ಪ್ರಜ್ಞಾ (28) ಮತ್ತು 14 ತಿಂಗಳ ತನ್ನ ಗಂಡು ಮಗು ಶಿವತೇಜನನ್ನು ಕೊಂದ ಮೇಲೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೂವರ ಸಾವಿನ ಕುರಿತು ಹನುಮಂತರ ತಂದೆ ಧರ್ಯಪ್ಪ ಎ ಶಿಂಧೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಕೆಲವು ತಿಂಗಳದಿಂದ ಈ ಕುಟುಂಬ ಕೆಲಸ ಹುಡುಕಿ ಕಾಂಡವಾಕ್‍ಗೆ ಬಂದಿತ್ತು. ನಂತರ ಸಣ್ಣ ಪುಟ್ಟ ಕೆಲಸವನ್ನು ಮಾಡಿ ಹನುಮಂತ ಕುಟುಂಬವನ್ನು ಸಾಕುತ್ತಿದ್ದ. ಲಾಕ್‍ಡೌನ್‍ನಲ್ಲಿ ಅದು ಕೂಡ ಇಲ್ಲದಾಯಿತು.

ನಿರುದ್ಯೋಗದಿಂದ ಹನುಮಂತ ನೊಂದುಕೊಂಡಿದ್ದರು. ರವಿವಾರ ಪತ್ನಿಯ ಕತ್ತು ಹಿಸುಕಿ ಕೊಂದರು. ನಂತರ ಮಗುವಿನ ಕೊರಳು ಕತ್ತರಿಸಿ ಕೊಂದರು. ಆಮೇಲೆ ಮಲಗುವ ಕೋಣೆಯ ಫ್ಯಾನ್‍ಗೆ ನೇಣು ಹಾಕಿಕೊಂಡು ಹನುಮಂತ ಆತ್ಮಹತ್ಯೆ ಮಾಡಿಕೊಂಡರು ಎಂದು ತಿಳಿದು ಬಂದಿದೆ. ಮೃತದೇಹಗಳನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದ್ದು . ಧರ್ಯಪ್ಪ ನವರ ದೂರಿನ ಹಿನ್ನೆಲೆಯಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.