ಕೇರಳ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ವಿರುದ್ಧ 4 ಪುಟಗಳ ಕ್ರಿಮಿನಲ್ ಕೇಸುಗಳ ಜಾಹೀರಾತು ಮುದ್ರಣ!: ಕಾರಣವೇನು ಗೊತ್ತೇ?

0
982

ಪತ್ತನಂತಿಟ್ಟ: ಗುರುವಾರ ಬೆಳಿಗ್ಗೆ, ಜನ್ಮಭೂಮಿ ದಿನಪತ್ರಿಕೆ ಪಥನಂತಿಟ್ಟ ಆವೃತ್ತಿಯಲ್ಲಿ ಓದುಗರಿಗೆ ವಿಚಿತ್ರವಾದ ನಾಲ್ಕು-ಪುಟಗಳ ಜಾಹೀರಾತು ಕಾಣಿಸಿಕೊಂಡಿತು. ಇದು ಉತ್ಪನ್ನಗಳ ಕುರಿತಾಗಲಿ, ಸೇವೆ ಅಥವಾ ಸರ್ಕಾರದ ಟೆಂಡರ್ ನೋಟಿಸು ಕುರಿತಾದ ಜಾಹೀರಾತು ಅಲ್ಲವೆಂಬುದನ್ನು ಶೀಘ್ರವಾಗಿ ಅರಿತುಕೊಂಡ ಜನರು ಲೋಕಸಭಾ ಚುನಾವಣೆಗೆ ಬಿಜೆಪಿ ಪಥನಂತಿಟ್ಟ ಅಭ್ಯರ್ಥಿಯಾಗಿರುವ ಕೆ.ಸುರೇಂದ್ರನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳ ಪಟ್ಟಿ ಎಂಬುದನ್ನು ಅರಿತುಕೊಂಡರು.

ಕೇರಳ ಬಿಜೆಪಿ ಅಭ್ಯರ್ಥಿಯಾದ ಕೆ. ಸುರೇಂದ್ರನ್ ವಿರುದ್ಧ 240 ಕ್ರಿಮಿನಲ್ ಮೊಕದ್ದಮೆಗಳು ಇರುವುದನ್ನು ಜನ್ಮಭೂಮಿ ಪತ್ರಿಕೆಯಲ್ಲಿ ಮುದ್ರಿಸಲಾಗಿತ್ತು. ಚುನಾವಣಾ ಆಯೋಗದ ಆದೇಶದಂತೆ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳ ಅರಿವು ಜನರಿಗೆ ಇರಲಿ ಎಂಬ ಉದ್ದೇಶದಿಂದ ಪ್ರಮುಖ ಮೂರು ಸುದ್ದಿವಾಹಿನಿಗಳಲ್ಲಿ ಅಥವಾ ಒಂದೇ ಪತ್ರಿಕೆಯಲ್ಲಿ ಮೂರು ಬಾರಿ ಕ್ರಿಮಿನಲ್ ಮೊಕದ್ದಮೆಗಳ ಕುರಿತು ಮುದ್ರಿಸಲು ಆದೇಶಿಸಿತ್ತು‌. ಈ ಪ್ರಕರಣಗಳಲ್ಲಿ 90% ಪ್ರಕರಣಗಳು ಶಬರಿಮಲೆಗೆ ಸಂಬಂಧಿಸಿದವುಗಾಳಾಗಿರುವುದಾಗಿ ತಿಳಿದು ಬಂದಿದ್ದು, ಕೊಲೆ ಯತ್ನ, ಮಹಿಳೆಯರ ಮೇಲೆ ಹಲ್ಲೆ ಸೇರಿದಂತೆ ಇತರೆ ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣಗಳಲ್ಲಿ ಜಿಲ್ಲಾವಾರು ವಿಂಗಡನೆ ನಡೆಸುವುದಾದಲ್ಲಿ 68 ಪ್ರಕರಣಗಳು ಕೊಲಂ ಜಿಲ್ಲೆಯಲ್ಲಿ, 3 ಪ್ರಕರಣಗಳು ತಿರುವನಂತಪುರಂನಲ್ಲಿ, 30 ಪ್ರಕರಣಗಳು ಪತ್ತನಂತಿಟ್ಟದಲ್ಲಿ, 56 ಪ್ರಕರಣಗಳು ಆಲಪುಳ ಜಿಲ್ಲೆಯಲ್ಲಿ, 8 ಪ್ರಕರಣಗಳು ಕೊಟ್ಟಾಯಂ ಜಿಲ್ಲೆಯಲ್ಲಿ, 17 ಪ್ರಕರಣಗಳು ಇಡುಕ್ಕಿಯಲ್ಲಿ, 13 ಪ್ರಕರಣಗಳು ಎರ್ನಾಕುಲಂ ನಲ್ಲಿ, 6 ತ್ರಿಶೂರ್, 2 ಕೋಝಿಕೋಡ್, ಮಲಪ್ಪುರಂ,ವಯನಾಡ್,ಕಣ್ಣೂರ್ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ಹಾಗೂ 33 ಪ್ರಕರಣಗಳು ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗಿವೆ.

ಮಾಹಿತಿಗಳ ಪ್ರಕಾರ ಈ ರೀತಿ ನಾಲ್ಕು ಪುಟಗಳ ಜಾಹೀರಾತು ನೀಡಲು ಕನಿಷ್ಟ 20 ಲಕ್ಷ ವೆಚ್ಚ ತಗಲುತ್ತದೆಯಲ್ಲದೇ ಮೂರು ಬಾರಿ ಪ್ರಕಟಿಸಲು 60 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಚುನಾವಣಾ ಆಯೋಗ ಅಭ್ಯರ್ಥಿಗಳಿಗೆ ತಲಾ 75 ಲಕ್ಷ ವೆಚ್ಚ ಮಾಡಲು ಮಾತ್ರ ಅವಕಾಶ ನೀಡುತ್ತದೆ. ಹೀಗಿರುವಾಗ ಈಗಾಗಲೇ 60 ಲಕ್ಷ ವ್ಯಯಿಸಿರುವ ಕೆ. ಸುರೇಂದ್ರನ್ ರವರಲ್ಲಿ 15 ಲಕ್ಷ ವೆಚ್ಚ ಮಾಡುವಷ್ಟು ಮಿತಿಯಿದ್ದು ಒಂದು ವೇಳೆ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಮೀರಿ ನಡೆದರೆ ಅಭ್ಯರ್ಥಿತ್ವಕ್ಕೆ ಕುತ್ತು ಬರುವ ಸಾಧ್ಯತೆಗಳು ಅಧಿಕವಾಗಿವೆ.