ಸನ್ಮಾರ್ಗ ವಾರ್ತೆ
ವಾಷಿಂಗ್ಟನ್: ಅಮೆರಿಕದಲ್ಲಿ ವಿದ್ಯಾಭ್ಯಾಸದ ನಂತರ ತಾತ್ಕಾಲಿಕವಾಗಿ ಕೆಲಸ ಮಾಡಲು ಬಯಸುವ ವಿದೇಶಿ ವಿದ್ಯಾರ್ಥಿಗಳಿಗೆ ಆಘಾತಕಾರಿ ಸುದ್ದಿ ಬಂದಿದೆ. ಇಂಟರ್ನ್ಶಿಪ್ ಮತ್ತು ವರ್ಕ್ ಟ್ರೈನಿಂಗ್ ಅನುಮತಿ ನೀಡುವ ಆಪ್ಟ್ ಕೌನ್ಸಿಲ್ ಪ್ರಾಕ್ಟಿಕಲ್ ಟ್ರೈನಿಂಗ್ ಹೊಸ ನಿರ್ಧಾರ ಪ್ರಕಟಿಸಿದ್ದು.
ಭಾರಿ ಶುಲ್ಕ: ಹೊಸ ಪ್ರಸ್ತಾವನೆಯ ಪ್ರಕಾರ ಎಫ್1 ವಿಸಾದಲಿ ್ಲಬರುವ ವಿದ್ಯಾರ್ಥಿಯನ್ನು ಸೇರಿಸಿಕೊಳ್ಳಲು ಶಿಕ್ಷಣ ಸಂಸ್ಥೆಗಳು (ವಿಶ್ವವಿದ್ಯಾಲಯಗಳು/ಕಾಲೇಜುಗಳು) ಸರ್ಕಾರಿ ಶುಲ್ಕವಾಗಿ 70,000 ಡಾಲರ್ಗಳನ್ನು (ಸುಮಾರು 67.7 ಲಕ್ಷ ರೂಪಾಯಿ) ಪಾವತಿಸಬೇಕಾಗುತ್ತದೆ.
ಮುಂದಿನ ಹಂತದಲ್ಲಿ ಈ ಅನುಮತಿಯನ್ನು ನವೀಕರಿಸಬೇಕಾದರೆ 30,000 ಡಾಲರ್ಗಳನ್ನು (ಸುಮಾರು 29 ಲಕ್ಷ ರೂಪಾಯಿ) ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ.
ಇದರಿಂದ ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅತಿ ಹೆಚ್ಚು ಸಂಖ್ಯೆಯಲ್ಲಿ ತೆರಳುವ ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಅನೇಕರಿಗೆ ಇದು ವಿಪರೀತ ಆರ್ಥಿಕ ಹೊರೆ ಆಗಲಿದೆ. ಸರಕಾರಕ್ಕೆ ತೆರಬೇಕಾದ ಈ ಭಾರಿ ಮೊತ್ತವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಕಾಲೇಜುಗಳು ವಿದ್ಯಾರ್ಥಿಗಳ ಮೇಲೆ ಹೇರುವ ಸಾಧ್ಯತೆಯಿದೆ. ಈ ಪ್ರಸ್ತಾವಕ್ಕೆ ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದ ನಂತರ ಕಾನೂನನ ರೂಪ ನೀಡಲಾಗುವುದು.












