ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಫೇಲ್ ಯುದ್ಧ ವಿಮಾನ ಒಪ್ಪಂದವನ್ನು ರದ್ದುಗೊಳಿಸುವುದಿಲ್ಲ ಮತ್ತು ಈ ವ್ಯವಹಾರವನ್ನು ಪಾರದರ್ಶಕಗೊಳಿಸಿ ಉತ್ತಮ ಬೆಲೆಗೆ ಇನ್ನಷ್ಟು ಖರೀದಿಸುತ್ತೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದರು.
ಅವರು ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ಸಂದರ್ಶನ ನೀಡುತ್ತಿದ್ದರು.
“ಇದು ನ್ಯಾಯಾಂಗ ನಿರ್ಣಯಕ್ಕೆ ಸೂಕ್ತವಾದ ವಿಷಯವಲ್ಲ” ಎಂದು ಅವರು ಹೇಳಿದರು.
“ನಾವು ರಫೇಲ್ ವಿಮಾನವನ್ನು ಆಯ್ಕೆ ಮಾಡಿದವರು. ನಾವು ರಫೇಲ್ ವಿಮಾನವನ್ನು ಏಕೆ ರದ್ದು ಮಾಡಬೇಕು? ರಫೇಲ್ ಉತ್ತಮ ವಿಮಾನ. ನಮಗೆ ಆ ವಿಮಾನ ಬೇಕು. ವಾಸ್ತವವಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ, 126 ರಫೇಲ್ ವಿಮಾನವನ್ನು ಹೇಗೆ ಖರೀದಿಸಬಹುದು ಎಂಬುದನ್ನು ವಿಚಾರಮಾಡಬಹುದು, ತ್ವರಿತ ಹಂಚಿಕೆಗಾಗಿ ಕೇಳಬಹುದು. ಆದರೆ ನಾವು ಖಂಡಿತವಾಗಿಯೂ ಬೆಲೆಯನ್ನು ನೋಡುತ್ತೇವೆ, ನಾವು ಖಚಿತವಾಗಿ ವಿತರಣಾ ಅವಧಿಯನ್ನು ನೋಡುತ್ತೇವೆ, ನಾವು ಒಪ್ಪಿದಂತೆ ಸಂರಚನೆಯು ಒಂದೇ ಆಗಿವೆಯೇ ಎಂದು ಪರಿಶೀಲಿಸುತ್ತೇವೆ. ಆದರೆ ರಫೇಲ್ ವಿಮಾನದ ಒಪ್ಪಂದವನ್ನು ರದ್ದು ಮಾಡುವುದಿಲ್ಲ.
“ನ್ಯಾಯಾಲಯವನ್ನು ಸಮೀಪಿಸುವ ಪ್ರವೃತ್ತಿಯನ್ನು ನಾನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಇದು ನ್ಯಾಯಾಂಗ ನಿರ್ಣಯಕ್ಕೆ ಅನುಗುಣವಾಗಿರುವ ವಿಷಯಗಳಲ್ಲ…ಇವುಗಳು ಸಂಸತ್ತಿನ ವ್ಯಾಪ್ತಿಗೆ ಒಳಪಟ್ಟ ವಿಷಯಗಳಾಗಿವೆ. ಅಮೇರಿಕಾದಲ್ಲಿ ಇದೇ ವಿಷಯ ಸಂಭವಿಸಿದೆ ಎಂದು ಭಾವಿಸೋಣ. ಅಮೇರಿಕಾ ಪ್ರತಿನಿದಿಗಳ ಸದನ, ಅಮೇರಿಕಾ ಸೆನೆಟ್ ತಕ್ಷಣವೇ ತನಿಖೆಯನ್ನು ಆರಂಭಿಸುತಿತ್ತು . ಬ್ರಿಟಿಷ್ ಹೌಸ್ ಆಫ್ ಕಾಮನ್ಸ್ ನಲ್ಲಿ, ಸಂಸದೀಯ ಸಮಿತಿಯು ಅದರ ಬಗ್ಗೆ ತನಿಖೆಯನ್ನು ಆರಂಭಿಸುತ್ತಿತ್ತು. ದುರದೃಷ್ಟವಶಾತ್, ನಮಗೆ ಸಂಸತ್ತಿದೆ, ನಮಗೆ ಸಂಸತ್ತು ಸಮಿತಿಗಳು ಇವೆ, ಆದರೆ ಅವುಗಳಲ್ಲಿ ಯಾವುದೂ ಸುಯೋ ಮೋಟಾ ಅಧಿಕಾರ ಅಥವಾ ಆಜ್ಞೆ ಅಧಿಕಾರ ಅಥವಾ ತನಿಖೆ ಪ್ರಾರಂಭಿಸುವ ಅಧಿಕಾರವನ್ನು ಹೊಂದಿಲ್ಲ. ಸರಕಾರವು ಅದನ್ನು ಸಮಿತಿಗೆ ಸೂಚಿಸದಿದ್ದರೆ, ಸಮಿತಿಗಳು ಅಸಹಾಯಕವೆಂದು ಅವರು ಹೇಳಿದರು.
”ವಾಯು ದಳ ಕನಿಷ್ಟ ಏಳು ವಾಯು ನೌಕ ತಂಡವನ್ನು ಬಯಸುತ್ತದೆ, ಈ ಹಿಂದೆ ನಾವು ಫ್ರಾನ್ಸ್ ನೊಂದಿಗೆ 126 ವಿಮಾನಗಳಿಗೆ ಒಪ್ಪಂದ ಮಾಡಿಕೊಂಡಿದೆ. ನೀವು ಅದನ್ನು 36 ಕ್ಕೆ ಇಳಿಸಿದ್ದೀರಿ. ಯಾಕೆ? ಬೆಲೆ ಅಗ್ಗವಾಗಿದ್ದರೆ, ನೀವು ನಿಜವಾಗಿ 8 ನೇ ವಾಯು ನೌಕಾ ತಂಡ ಮತ್ತು 9 ನೇ ವಾಯು ನೌಕಾ ತಂಡಕ್ಕೆ ಆದೇಶಿಸಬೇಕಾಗಿತ್ತು. ಬೆಲೆ ಅಗ್ಗವಾಗಿದೆಯೆಂದಾದರೆ, ನೀವು ಎರಡು ನೌಕಾ ತಂಡಗಳನ್ನೇಕೆ ಕಡಿತಗೊಳಿಸುತ್ತಿರುವಿರಿ, ಉತ್ತರ ಇಲ್ಲ,” ಎಂದು ಅವರು ಹೇಳಿದರು.
ಇದಕ್ಕೆ ಬದಲಾಗಿ ನಾವು ನಿಂದನೆಯನ್ನು ಎದುರಿಸುತ್ತಿದ್ದೇವೆ, ನೀನೊಬ್ಬ ಕುಟುಂಬ ರಾಜಕಾರಣಿ. ನೀನೋಬ್ಬ ಸುಳ್ಳುಗಾರ. ಇದು ಪ್ರಶ್ನೆಗಳಿಗೆ ಅವರು ನೀಡುತ್ತಿರುವ ಉತ್ತರ” ಎಂದು ಚಿದಂಬರಂ ಹೇಳಿದರು.
ಕೃಪೆ: ದಿ ಇಂಡಿಯನ್ ಎಕ್ಸ್ಪ್ರೆಸ್
ಕನ್ನಡಕ್ಕೆ: ಆಯಿಷತುಲ್ ಅಫೀಫ












