ಇಂಡೊನೇಶಿಯದಲ್ಲಿ ತೀವ್ರಗೊಂಡ ಸರಕಾರ ವಿರೋಧಿ ಪ್ರತಿಭಟನೆ: ಕಾರಣ ಏನು ಗೊತ್ತೇ?

0
667

ಸನ್ಮಾರ್ಗ ವಾರ್ತೆ-

ಜಕಾರ್ತ, ಆ. 22: ಇಂಡೊನೇಸಿಯದ ಪಶ್ಚಿಮ ಪ್ರಾಂತ ಪಪ್ವದಲ್ಲಿ ಸರಕಾರ ವಿರೋಧಿ ಪ್ರತಿಭಟನೆ ತೀವ್ರಗೊಂಡಿದ್ದು ದೇಶದ ವಿವಿಧ ಕಡೆಗಳಿಗೆ ವ್ಯಾಪಿಸುತ್ತಿರುವುದರಿಂದ ಹೆಚ್ಚಿನ ಸೈನ್ಯವನ್ನು ನಿಯೋಜಿಸಲಾಗಿದೆ. ಪ್ರತಿಭಟನೆ ಹಿಂಸಾಗ್ರಸ್ತಗೊಂಡು ಜೈಲು ಕೆಡವುವ ಯತ್ನವೂ ನಡೆಯಿತು. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸರಕಾರ, ಜನರ ನಡುವಿನ ಘರ್ಷಣೆ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿಯುತ್ತಿದೆ.

ಪಪ್ವಾ ವಂಶೀಯ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದದ್ದನ್ನು ಪ್ರತಿಭಟಿಸಿ ಸಾವಿರಾರು ಜನರು ಬೀದಿಗಿಳಿದಿದ್ದಾರೆ. ಪ್ರತಿಭಟನಾಕಾರರು ಸಾರ್ವಜನಿಕ ಕಟ್ಟಡಕ್ಕೆ ಬೆಂಕಿ ಹಾಕುತ್ತಿದ್ದಾರೆ. ರಸ್ತೆತಡೆ ಒಡ್ಡುತ್ತಿದ್ದಾರೆ. ಪಪ್ವಾ ಪ್ರಾಂತದ ರಾಜಧಾನಿ ಮಾನೊಕ್ವಾರಿಯಲ್ಲಿ ಪಾರ್ಲಿಮೆಂಟ್ ಕಟ್ಟಡಕ್ಕೆ, ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಘರ್ಷಣೆಯಲ್ಲಿ ಜನರು ಸಾವಿಗೀಡಾದ ಬಗ್ಗೆ ವರದಿಯಾಗಿಲ್ಲ. ಯುವಕರು, ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿ ಬೀದಿಗೆ ಬಂದಿದ್ದಾರೆ.

ಬುಧವಾರ ಪ್ರತಿಭಟನೆ ತೀವ್ರಗೊಂಡಿತ್ತು. ನಂತರ ನೂರಾರು ಸೈನಿಕರನ್ನು ರಾಜಧಾನಿ ಜಕಾರ್ತದಲ್ಲಿ ನಿಯೋಜಿಸಲಾಗಿದೆ ಎಂದು ಅಧ್ಯಕ್ಷ ಜೊಕೊ ವಿದೊದ ಸಚಿವ ಸಂಪುಟದ ಸಚಿವ ವಿರಾಂಟೊ ತಿಳಿಸಿದರು.