ಆರ್ಟಿಕಲ್ 370 ರದ್ದು: ಭಾರತವನ್ನು ಬೆಂಬಲಿಸಿದ ಬಾಂಗ್ಲಾದೇಶ

0
752

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಆ. 22: ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ್ದು ಭಾರತಕ್ಕೆ ಸಂಬಂಧಿಸಿದ ಅವರ ಆಂತರಿಕ ವಿಷಯವೆಂದು ಬಾಂಗ್ಲಾದೇಶ ಹೇಳಿದೆ. ಜಮ್ಮು ಕಾಶ್ಮೀರದಲ್ಲಿ ಶಾಂತಿ, ಸ್ಥಿರತೆ ತರಬೇಕಾಗಿದೆ. ಮಾತ್ರವಲ್ಲ ಅಭಿವೃದ್ಧಿ ಪ್ರತಿಯೊಂದು ದೇಶದ ಪ್ರಥಮ ಪರಿಗಣನೆಯಾಗಿದೆ. ಆದ್ದರಿಂದ ಜಮ್ಮು ಕಾಶ್ಮೀರದಲ್ಲಿ ಭಾರತ ಸ್ವೀಕರಿಸಿದ ನಿಲುವು ಅವರ ಆಂತರಿಕ ವಿಷಯ ಎಂದು ಬಾಂಗ್ಲಾ ತಿಳಿಸಿದೆ.

ಭಾರತದ ಕ್ರಮಕ್ಕೆ ಅಮೆರಿಕವೂ ಬೆಂಬಲ ಸೂಚಿಸಿತ್ತು. ಭಾರತ, ಪಾಕಿಸ್ತಾನ ಸಮಸ್ಯೆಯನ್ನು ಉಭಯ ಕಕ್ಷಿ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಬೇಕೆಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದರು

.